ಮತಾಂತರವಾಗದಿದ್ದರೆ 32 ತುಂಡು ಮಾಡುವ ಬೆದರಿಕೆಯೊಡ್ಡಿದ ಲಿವಿಂಗ್‌ ಪಾರ್ಟ್ನರ್‌ : ಯುವತಿಯಿಂದ ದೂರು

ಲವ್‌ ಜಿಹಾದ್‌ ಮಾಡಿದ್ದಾನೆಂದು ಅಳಲು ತೋಡಿಕೊಂಡ ಯುವತಿ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ವರದಿಯಾಗಿದ್ದು ತಾನು ಪ್ರೀತಿಸಿದ್ದ ಹಿಂದೂ ಯುವತಿ ಮುಸ್ಲಿಂ ಮತಕ್ಕೆ ಮತಾಂತರವಾಗದಿದ್ರೆ ಆಕೆಯನ್ನು ಕೊಂದು 32 ತಂಡು ಮಾಡುತ್ತೇನೆ ಎಂದು ಮುಸ್ಲಿಂ ಯುವಕನೋರ್ವ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ಬಗ್ಗೆ ಸ್ವತಃ ಸಂತ್ರಸ್ತ ಹಿಂದೂ ಯುವತಿ ಮಾಧ್ಯಮಗಳೊಂದಿಗೆ ತನ್ನ ಅಳಲು ತೋಡಿಕೊಂಡಿದ್ದು, ಮತಾಂತರಗೊಂಡರಷ್ಟೇ ಮದುವೆಯಾಗ್ತೀನಿ, ಇಲ್ಲವಾದ್ರೆ ದೆಹಲಿ ಮಾದರಿಯಲ್ಲಿ ಕೊಂದು 32 ಪೀಸ್​ ಮಾಡಿ ಬಳಿಕ ಎರಡನೇ ಮದುವೆಯಾಗ್ತೀನಿ ಎಂದು ಮನ ಬಂದಂತೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.





















































 
 

ಬೆಂಗಳೂರಿನ ಸುದ್ದಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ನಿವಾಸಿ ಉಸ್ಮಾನ್ ಎಂಬಾತನ ಮೇಲೆ ಯುವತಿ ಲವ್ ಜಿಹಾದ್‌ನ ಗಂಭೀರ ಆರೋಪ ಹೊರಿಸಿದ್ದಾರೆ. ಈ ಸಂಬಂಧ ಯುವತಿ ಸುದ್ದಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಯುವತಿ ಕೊಟ್ಟ ದೂರಿನ ಆಧಾರದ ಮೇಲೆ, ಪ್ರೀತಿ ಮಾಡಿ ಬಳಿಕ ಮದುವೆಯಾಗುವುದಾಗಿ ನಂಬಿಸಿ ಲಿವಿಂಗ್​ ಟು ಗೆದರ್​ ರಿಲೇಷನ್ ಶಿಪ್​ನಲ್ಲಿದ್ದ ಅನ್ಯಕೋಮಿನ ಯುವಕ, ಯುವತಿಗೆ ಮತಾಂತರಗೊಳ್ಳುವಂತೆ ಚಿತ್ರಹಿಂಸೆ ನೀಡಿದ್ದಾನೆ ಎಂದು ದೂರು ದಾಖಲಾಗಿದೆ.

ಆರೋಪಿ ಉಸ್ಮಾನ್ ಸಂತ್ರಸ್ತೆಗೆ ಎರಡು ವರ್ಷದ ಹಿಂದೆ ಸ್ನೇಹಿತರ ಮೂಲಕ ಪರಿಚಯ ಆಗಿದ್ದನಂತೆ. ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಆರಂಭದಲ್ಲಿ ಅನ್ಯಕೋಮಿನ ಯುವಕ ಎಂಬ ಕಾರಣಕ್ಕೆ ಯುವತಿ ಪ್ರೀತಿ ನಿರಾಕರಿಸಿದ್ದಳಂತೆ. ಈ ವೇಳೆ ಉಸ್ಮಾನ್​, ತನ್ನ ಪ್ರೀತಿ ಒಪ್ಪಿಕೊಳ್ಳದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕಿದ್ದನಂತೆ. ಬಳಿಕ ಮತಾಂತರ ಆಗುವುದು ಬೇಡ ಹಾಗೆ ಮದುವೆ ಆಗೋಣ ಎಂದು ಯುವತಿಯನ್ನ ನಂಬಿಸಿದ್ದ. ಉಸ್ಮಾನ್ ಮಾತಿಗೆ ಮರುಳಾದ ಯುವತಿ ನಂತರ ಪ್ರೀತಿಗೆ ಒಪ್ಪಿಕೊಂಡಿದ್ದಾಳೆ. ಇಬ್ಬರು 1.5 ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದರು. ನಂತರ ಯುವತಿ ಮದುವೆಯಾಗು ಎಂದು ಉಸ್ಮಾನ್​ ಬಳಿ ಕೇಳಿದಾಗ, ಮತಾಂತರಗೊಂಡರಷ್ಟೇ ಮದುವೆ ಎಂದು ಆತ ಉಲ್ಟಾ ಹೊಡೆದಿದ್ದ ಎಂದು ಸಂತ್ರಸ್ತೆ ದೂರಿದ್ದಾರೆ.

ಯುವತಿ ಮತಾಂತರಕ್ಕೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಆರೋಪಿ ಉಸ್ಮಾನ್ ಆಕೆಯ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದ . ಮಾತ್ರವ್ಲಲ್ಲದೆ ಯುವತಿಯಿಂದ ಈತ ಬರೊಬ್ಬರಿ 12.20 ಲಕ್ಷ ರೂ ಹಣವನ್ನು ಪಡೆದಿದ್ದನಂತೆ. ಬಳಿಕ ಇದು ಅಷ್ಟಕ್ಕೇ ನಿಲ್ಲದೆ ಆರೋಪಿ ಉಸ್ಮಾನ್ ಆಕೆಯ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಪಡೆದು ಅಡವಿಟ್ಟಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ ಉಸ್ಮಾನ್ ಡ್ರಗ್ ಅಡಿಕ್ಟ್ ಎಂಬ ವಿಚಾರ ಯುವತಿಗೆ ತಿಳಿದುಬಂದಿದ್ದು, ಹಣ ಮತ್ತು ಚಿನ್ನ ವಂಚಿಸಿದ್ದಲ್ಲದೆ, ಯುವತಿಯ ಖಾಸಗಿ ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಮತ್ತು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದೂ ಆರೋಪಿಸಲಾಗಿದೆ. ಉಸ್ಮಾನ್‌ನಿಂದ ತೀವ್ರ ನೊಂದಿದ್ದ ಯುವತಿ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಮಾರ್ಚ್‌ನಲ್ಲೇ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದೂರು ನೀಡಿದ್ದ ಯುವತಿ ಇದೀಗ ಸರಿಯಾದ ಕ್ರಮ ತೆಗೆದುಕೊಳ್ಳಲು ಪೊಲೀಸರು ಹಿಂದೇಟು ಹಾಕ್ತಿದ್ದಾರೆ ಎಂದು ಆರೋಪಿಸಿದ್ದಾರೆ. ತಾನು ಹೇಳಿದಂತೆ ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್ ಮಾಡಿಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಸಂತ್ರಸ್ತೆ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.

error: Content is protected !!
Scroll to Top