ಧರ್ಮಸ್ಥಳ ಪ್ರಕರಣ ತನಿಖೆ ಪೂರ್ಣಗೊಂಡಿಲ್ಲ : ಮೊಹಾಂತಿ ಸ್ಪಷ್ಟನೆ

ತನಿಖೆ ಇನ್ನೂ ಮುಂದುವರಿಯಲಿದೆ ಎಂದು ಎಸ್‌ಐಟಿ ಮುಖ್ಯಸ್ಥ

ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸರಕಾರಕ್ಕೆ ಸಲ್ಲಿಕೆ ಆಗಿರುವುದು ಈವರೆಗಿನ ವರದಿ ಮಾತ್ರ. ಚಾಜ್‌ರ್ಶೀಟ್ ಅಲ್ಲ ಎಂದು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಬೆಂಗಳೂರಿನ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಅಂತಿಮ ಚಾಜ್‌ರ್ಶೀಟ್ ಸಲ್ಲಿಕೆಯಾಗಿದೆ ಅಥವಾ ಸಿದ್ಧಗೊಂಡಿದೆ ಎಂದು ಹೇಳಿದವರು ಯಾರು? ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈಗ ಸಲ್ಲಿಕೆ ಆಗಿರುವುದು ದೋಷಾರೋಪ ಪಟ್ಟಿ ಅಲ್ಲ, ತನಿಖೆಯ ವರದಿ ಅಷ್ಟೇ ಎಂದರು.





















































 
 

ಈ ಬುರುಡೆ ಪ್ರಕರಣದಲ್ಲಿ ಚಿನ್ನಯ್ಯನನ್ನು ಮಾತ್ರ ಗುರಿಯಾಗಿಸಿ ಬಂಧಿಸಲಾಯಿತು, ಇದಕ್ಕೆ ಸಂಬಂಧಿಸಿದ ಉಳಿದವರನ್ನೇಕೆ ಬಂಧಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಣಬ್ ಮೊಹಾಂತಿ, ಎಲ್ಲರನ್ನು ಬಂಧನ ಮಾಡುವುದೇ ತನಿಖೆಯಲ್ಲ. ಸದ್ಯ ಪ್ರಕರಣದ ತನಿಖೆ ಉತ್ತಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top