ಪ್ರತಿ ಭಾನುವಾರ ಮಂಗಳೂರಿನಿಂದ ಹೊರಡಲಿರುವ ರೈಲು
ಮಂಗಳೂರು : ಶಬರಿಮಲೆ ಯಾತ್ರಾರ್ಥಿಗಳ ದಟ್ಟಣೆಯ ಹಿನ್ನೆಲೆಯಲ್ಲಿ ಮಂಗಳೂರು ಜಂಕ್ಷನ್ ಮತ್ತು ತಿರುವನಂತಪುರ ನಾರ್ತ್ ನಿಲ್ದಾಣಗಳ ನಡುವೆ ವಿಶೇಷ ರೈಲುಗಳು ಸಂಚರಿಸಲಿವೆ.
ಮಂಗಳೂರು ಜಂಕ್ಷನ್-ತಿರುವನಂತಪುರ ನಾರ್ತ್ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ (ನಂ. 06041) ರೈಲು ಡಿ.7ರಿಂದ ಜ.18ರ ವರೆಗೆ ಪ್ರತಿ ಭಾನುವಾರ ಸಂಜೆ 6ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಟು ಮರುದಿನ ಬೆಳಗ್ಗೆ 6.30ಕ್ಕೆ ತಿರುವನಂತಪುರ ನಾರ್ತ್ ತಲುಪಲಿದೆ.
ಅದೇ ರೀತಿ ತಿರುವನಂತಪುರ ನಾರ್ತ್-ಮಂಗಳೂರು ಜಂಕ್ಷನ್ ವೀಕ್ಲಿ ಎಕ್ಸ್‌ಪ್ರೆಸ್ ಸ್ಪೆಷಲ್ (ನಂ.06042) ರೈಲು ಡಿ.8ರಿಂದ ಜ.19ರ ವರಗೆ ಪ್ರತಿ ಸೋಮವಾರ ಬೆಳಗ್ಗೆ 8.30ಕ್ಕೆ ತಿರುವನಂತಪುರ ನಾರ್ತ್‌ನಿಂದ ಹೊರಟು ಅದೇ ದಿನ ರಾತ್ರಿ 8.30ಕ್ಕೆ ಸೆಂಟ್ರಲ್ ತಲುಪಲಿದೆ.
























