ಉಪ್ಪಿನಂಗಡಿ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಓರ್ವನನ್ನು ಪೋಕ್ಸೊ ಕಾಯ್ದೆಯಡಿ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಪೆರಿಯಡ್ಕ ನಿವಾಸಿ ಮುಹಮ್ಮದ್ ಮುಸ್ತಫ (40) ಬಂಧಿತ ಆರೋಪಿ.
ಈತ ಎರಡು ತಿಂಗಳಿಂದ ಬಾಲಕಿಯನ್ನು ಬಸ್ ನಿಲ್ದಾಣದಿಂದ ಹಿಂಬಾಲಿಸುತ್ತಿದ್ದು, ನ.29ರಂದು ಮನೆಗೆ ಕರೆದಿದ್ದಾನೆ ಎಂದು ಬಾಲಕಿಯ ಸಹೋದರ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

