ಉಪ್ಪಿನಂಗಡಿ: ಅಪ್ರಾಪ್ತ ಬಾಲಕುಯೊಬ್ಬಳನ್ನು ಹಿಂಬಾಲಿಸಿ, ತನ್ನ ಮನೆಗೆ ಕರೆದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಹಮ್ಮದ್ ಮುಸ್ತಫಾ (40) ಎಂದು ಗುರುತಿಸಲಾಗಿದೆ.
ಕಳೆದ ಎರಡು ತಿಂಗಳಿನಿಂದ ಆರೋಪಿ ಮುಸ್ತಫಾ ಅಪ್ರಾಪ್ತ ಬಾಲಕಿಯನ್ನು ಬಸ್ಸು ನಿಲ್ದಾಣದಿಂದ ಹಿಂಬಾಲಿಸುವ ಕೆಲಸ ಮಾಡುತ್ತಿದ್ದನು. ಆ ಬಳಿಕ ಆಕೆಯನ್ನು ತನ್ನ ಮನೆಗೆ ಬರುವಂತೆ ಕರೆದಿದ್ದಾನೆ. ಈ ವಿಚಾರವನ್ನು ಬಾಲಕಿ ತನ್ನ ಮನೆಯಲ್ಲಿ ತಿಳಿಸಿದ್ದು, ಮನೆಯವರು ಮುಸ್ತಫಾನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.
























