ಸುಳ್ಳು ಸುದ್ದಿ ಹಬ್ಬಿಸಿ‌ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದವರ ‌ವಿರುದ್ಧ ಮಧು ಬಂಗಾರಪ್ಪ ಗರಂ

ಬೆಂಗಳೂರು: ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಭಯ, ಗೊಂದಲ, ಆತಂಕ ಹುಟ್ಟಿಸುವವರ ವಿರುದ್ಧ ಸಚಿವ ಮಧು ಬಂಗಾರಪ್ಪ ಗುಡುಗಿದ್ದಾರೆ.

SSLC – PUC ಗೆ ಕಳೆದ ವರ್ಷದಂತೆ ಈ ವರ್ಷ ಸಹ ಮೂರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳಲ್ಲಿ ಆತಂಕ, ಗೊಂದಲ ಸೃಷ್ಟಿ ಮಾಡುವವರಿಗೆ ಅವರು ಎಚ್ಚರಿಕೆ ನೀಡಿದ್ದಾರೆ.

ಶಿಕ್ಷಣ ಇಲಾಖೆ ಉತ್ತೀರ್ಣವಾಗಲು 33% ಅಂಕಗಳನ್ನು ಪಡೆಯಬೇಕು ಎಂದಿದೆ. ಅದರಂತೆ ಪರೀಕ್ಷಾ ವಿಧಾನದಲ್ಲೂ ಮಾರ್ಪಾಡು ತಂದಿದೆ. ಮೂರನೇ ಪರೀಕ್ಷೆಯನ್ನು ಸರ್ಕಾರ ಕೈಬಿಟ್ಟಿದೆ ಎಂಬುದಾಗಿ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿದ್ದವು. ಇದಕ್ಕೆ ಸ್ಪಷ್ಟನೆ ನೀಡಿದ ಅವರು ಸುಳ್ಳು ಸುದ್ದಿ ಹಬ್ಬುವವರಿಗೆ ಎಚ್ಚರಿಕೆ ನೀಡಿರುವುದಾಗಿದೆ.





















































 
 
error: Content is protected !!
Scroll to Top