ಭಾರತ ಜಾತ್ಯಾತೀತವಾಗಿರುವುದಕ್ಕೆ ಕಾರಣ ಹಿಂದೂಗಳ ಉದಾರತೆ: ಕೆ.ಕೆ. ಮುಹಮ್ಮದ್

ಕೋಝಿಕ್ಕೋಡ್: ಹಿಂದೂಗಳಿಗೆ ಅಯೋಧ್ಯೆಯ ಶ್ರೀ ರಾಮ ಮಂದಿರ ಮಾತ್ರವಲ್ಲ ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಬಿಟ್ಟು ಕೊಡಬೇಕಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಮಾಜಿ ಪ್ರಾದೇಶಿಕ ನಿರ್ದೇಶಕ ಕೆ. ಕೆ. ಮುಹಮ್ಮದ್ ತಿಳಿಸಿದ್ದಾರೆ.

ನಾನು ಈ ಹಿಂದೆಯೇ ಹೇಳಿದ್ದೆ. ಮುಸಲ್ಮಾನರು ಇನ್ನೂ ಎರಡು ಐತಿಹಾಸಿಕ ಸ್ಥಳಗಳನ್ನು ಹಿಂದೂಗಳಿಗೆಬಿಟ್ಟು ಕೊಡಬೇಕಾಗುತ್ತದೆ ಎಂದು. ಶ್ರೀ ಕೃಷ್ಣನ ಜನ್ಮಸ್ಥಾನವಾದ ಮಥುರಾ, ಶಿವನಿಗೆ ಸಂಬಂಧಿಸಿದ ಕಾಶೀಯಲ್ಲಿನ ಜ್ಞಾನವಾಪಿ ‌ಮಸೀದಿಗಳಿಗೆ ಸಂಬಂಧಿಸಿದ ಹಾಗೆ ಅವರು ಮಾಧ್ಯಮಗಳಿಗೆ ಈ ಹೇಳಿಕೆ ನೀಡಿರುವುದಾಗಿದೆ.

ಮುಸಲ್ಮಾನರಿಗಾಗಿ ಭಾರತೀಯರು ಪಾಕಿಸ್ತಾನವನ್ನು ಬಿಟ್ಟು ಕೊಟ್ಟ ನಂತರವೂ ಭಾರತ ಜಾತ್ಯಾತೀತವಾಗಿ ಉಳಿದಿದೆ ಎಂದರೆ ಅದಕ್ಕೆ ಕಾರಣ ಹಿಂದೂಗಳಲ್ಲಿನ ಉದಾರತೆ. ಮುಸ್ಲಿಂ ಬಾಹುಳ್ಯ ಇದ್ದಿದ್ದರೆ ಅದು ಜಾತ್ಯಾತೀತ ಆಗಿರಲು ಸಾಧ್ಯವಿರುತ್ತಿರಲಿಲ್ಲ. ಈ ಸೂಕ್ಷ್ಮ ಸಂಗತಿಯನ್ನು ಮುಸಲ್ಮಾನರು ಅರಿಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.





















































 
 

ಕಮ್ಯುನಿಸ್ಟ್ ಇತಿಹಾಸಕಾರರೊಂದಿಗೆ ಈ ವಿಷಯಗಳ ಬಗ್ಗೆ ಮಾತನಾಡಬಾರದು. ಅವರು ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತಾರೆ. ಮುಸ್ಲಿಮರಲ್ಲು ಒಂದಷ್ಟು ಜನರು ರಾಮ ಜನ್ಮಭೂಮಿಯನ್ನು ಹಸ್ತಾಂತರಿಸಲು ಸಿದ್ಧವಾಗಿದ್ದರು. ಅಯೋಧ್ಯೆ ರಾಮನ ಜನ್ಮಭೂಮಿ ಎನ್ನುವ ಕಾರಣಕ್ಕಾಗಿ. ಈ ಬಗ್ಗೆ ಅನೇಕರೊಂದಿಗೆ ಮಾತನಾಡಿದ್ದೇನೆ. ಆದರೆ ಕಮ್ಯುನಿಸ್ಟ್ ಇತಿಹಾಸಕಾರರು ಮುಸ್ಲಿಮರ ಮನಸ್ಸನ್ನು ವಿಷಪೂರಿತಗೊಳಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

error: Content is protected !!
Scroll to Top