ಡಿ.7ರಂದು ಉಡುಪಿ ಕೃಷ್ಣ ಮಠಕ್ಕೆ ಪವನ್‌ ಕಲ್ಯಾಣ್‌ ಆಗಮನ

ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿರುವ ಆಂಧ್ರದ ಉಪಮುಖ್ಯಮಂತ್ರಿ

ಉಡುಪಿ: ಡಿಸೆಂಬರ್‌ 7ರಂದು ಶ್ರೀಕೃಷ್ಣಮಠದ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶ ಉಪಮುಖ್ಯಮಂತ್ರಿ, ಜನಪ್ರಿಯ ನಟ ಪವನ್‌ ಕಲ್ಯಾಣ್‌ ಭಾಗವಹಿಸಲಿದ್ದಾರೆ.

ಪರ್ಯಾಯ ಶ್ರೀ ಪುತ್ತಿಗೆ ಮಠದ ಆಯೋಜನೆಯ ಗೀತೋತ್ಸವ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಪವನ್‌ ಕಲ್ಯಾಣ್‌ ಆಗಮಿಸಲಿದ್ದಾರೆ. ನ.8ರಂದು ಪೇಜಾವರ ಶ್ರೀಗಳಿಂದ ಗೀತೋತ್ಸವ ಉದ್ಘಾಟನೆಗೊಂಡಿತ್ತು. ಲಕ್ಷಕಂಠ ಗೀತಪಾರಾಯಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದರು. ಗೀತೋತ್ಸವ ಸಮಾರೋಪದಲ್ಲಿ ಆಂಧ್ರದ ಡಿಸಿಎಂ ಭಾಗಿಯಾಗಲಿದ್ದಾರೆ.





















































 
 

error: Content is protected !!
Scroll to Top