ಟೋಕನ್ ವಿಚಾರದಲ್ಲಿ ಜಗಳವಾಡಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ
ಪುತ್ತೂರು : ನಗರದ ದರ್ಬೆಯ ಇಎನ್‌ಟಿ ಕ್ಲಿನಿಕ್‌ನಲ್ಲಿ ಶನಿವಾರ ದಾಂಧಲೆ ಎಸಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಅಋೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳ್ಳಂಬೆಳಗ್ಗೆ ದರ್ಬೆಯಲ್ಲಿರುವ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿ ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ ಇಬ್ರಾಹಿಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕ್ಲಿನಿಕ್ ಸಿಬ್ಬಂದಿ ಶ್ರೀಕಾಂತ್ ಹಲ್ಲೆಗೊಳಗಾದವರು
ಶನಿವಾರ ಬೆಳಗ್ಗೆ 6.30ರ ವೇಳೆ ಬಂದ ಇಬ್ರಾಹೀಂ ತಮ್ಮ ಪರಿಚಯಸ್ಥರಿಗೆ ಆದ್ಯತೆ ನೀಡುವಂತೆ ಸಿಬ್ಬಂದಿಗೆ ಒತ್ತಾಯಿಸಿದ್ದರು. ಸಿಬ್ಬಂದಿ ಟೋಕನ್ ಪ್ರಕಾರ ಕಳುಹಿಸುವುದಾಗಿ ತಿಳಿಸಿದಾಗ ಮಾತಿನ ಚಕಮಕಿ ನಡೆದು, ಕ್ಲಿನಿಕ್‌ನ ಸಿಬ್ಬಂದಿ ಶ್ರೀಕಾಂತ್‌ಗೆ ಆರೋಪಿ ಹಲ್ಲೆ ನಡೆಸಿದ್ದಾರೆ. ಕ್ಲಿನಿಕ್‌ನ ಪೀಠೋಪಕರಣಗಳಿಗೆ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ಲಿನಿಕ್‌ನ ವೈದ್ಯ ಡಾ.ರಾಮಮೋಹನ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
























