ಸೀರೆ ಬೈಕ್ ಟಯರ್‌ಗೆ ‌ಸುತ್ತಿ ರಸ್ತೆಗೆಸೆಯಲ್ಪಟ್ಟ ಮಹಿಳೆ

ಮಂಗಳೂರು: ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಸೀರೆ ಟಯರ್‌ಗೆ ಸುತ್ತಿದ ಪರಿಣಾಮ ಮಹಿಳೆ ರಸ್ತೆಗೆ ಎಸೆಯಲ್ಪಟ್ಟ ಘಟನೆ ಸುರತ್ಕಲ್‌ನ ಕಾನ ಎಂಬಲ್ಲಿ ನಡೆದಿದೆ.

ಮಹಿಳೆ ತಮ್ಮ ಪುತ್ರನ ಜೊತೆಗೆ ಬೈಕಿನಲ್ಲಿ ಹೋಗುತ್ತಿದ್ದರು. ಅವರ ಸೀರೆ ಟಯರ್‌ಗೆ ಸುತ್ತಿದ ಪರಿಣಾಮ ಅವರು ರಸ್ತೆಗೆ ಬಿದ್ದಿದ್ದಾರೆ.

ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಬಸ್‌ ಒಂದರ ಚಾಲಕ ಮೊಯ್ದಿ ಎಂಬವರು ಬಸ್ಸು ನಿಲ್ಲಿಸಿ, ರಸ್ತೆಗೆಸೆಯಲ್ಪಟ್ಟ ಮಹಿಳೆಯನ್ನು ಆಸ್ಪತ್ರೆಗೆ ಕೊಂಡೊಯ್ಯುವುದಕ್ಕೆ ನೆರವಾಗಿದ್ದು, ಆ ಮೂಲಕ ಮಾನವೀಯತೆ ಮೆರೆದಿದ್ದಾರೆ.





















































 
 
error: Content is protected !!
Scroll to Top