ಟೆರರ್ ಡಾಕ್ಟರ್ ಉಮರ್ ಉನ್ ನಬಿಗೆ ಆಶ್ರಯ ನೀಡಿದ್ದ ಆರೋಪಿ
ನವದೆಹಲಿ: ದೆಹಲಿ ಕೆಂಪುಕೋಟೆ ಬಳಿ ಕಾರು ಬಾಂಬ್ ಸ್ಫೋಟ ಸಂಭವಿಸುವುದಕ್ಕೆ ಮುನ್ನ ಟೆರರ್ ಡಾಕ್ಟರ್ ಉಮರ್ ಉನ್ ನಬಿಗೆ ಆಶ್ರಯ ನೀಡಿದ್ದ ಆರೋಪದ ಮೇಲೆ ಫರಿದಾಬಾದ್ ನಿವಾಸಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಬಂಧಿತ ಸೋಯಾಬ್ ಈ ಪ್ರಕರಣದ 7ನೇ ಆರೋಪಿ ಎಂದು ಎನ್‌ಐಎ ತಿಳಿಸಿದೆ. ಕೆಂಪುಕೋಟೆ ಸಮೀಪ ಕಾರು ಸ್ಫೋಟ ಸಂಭವಿಸುವುದಕ್ಕೆ ಮುನ್ನ ಸೋಯಾಬ್ ಉಗ್ರ ಉಮರ್‌ಗೆ ಆಶ್ರಯ ನೀಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ.
ನ.10ರಂದು ಸಂಜೆ 6.52ಕ್ಕೆ ಕಾರು ಸ್ಫೋಟ ಸಂಭವಿಸಿ 15 ಜನರು ಸಾವನ್ನಪ್ಪಿ, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ಸಂಬಂಧ ಸ್ಫೋಟದಲ್ಲಿ ಭಾಗಿಯಾಗಿದ್ದ ವೈದ್ಯ ಉಮರ್‌ನ ಮನೆಯನ್ನು ಭದ್ರತಾ ಪಡೆಗಳು ಧ್ವಂಸ ಮಾಡಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು 7ನೇ ಆರೋಪಿಯನ್ನು ಇಂದು ಬಂಧಿಸಿದ್ದಾರೆ.
























