ಖ್ಯಾತ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ ನಿಧನ

ಉಡುಪಿ: ಚೆಲುವೆ ಚಿತ್ರಾವತಿ, ರತಿ ರೇಖಾ, ಶೂದ್ರ ತಪಸ್ವಿನಿಯಂಥ ಸೂಪರ್‌ ಹಿಟ್‌ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಪ್ರಸಂಗಕರ್ತ, ನಿವೃತ್ತ ಶಿಕ್ಷಕ ಕಂದಾವರ ರಘುರಾಮ ಶೆಟ್ಟಿಯವರು ಬುಧವಾರ ಬೆಳಗ್ಗೆ (ನ.26) ನಿಧನರಾಗಿದ್ದಾರೆ. ಅವರಿಗೆ 89 ವರ್ಷ ಪ್ರಾಯವಾಗಿತ್ತು.

ಕಂದಾವರ ರಘುರಾಮ ಶೆಟ್ಟಿಯವರು ತಾಳಮದ್ದಳೆ ಅರ್ಥಧಾರಿ, ಹವ್ಯಾಸಿ ವೇಷಧಾರಿಯಾಗಿ ಮತ್ತು ನಾಟಕ ಕಲಾವಿದರಾಗಿಯೂ ಪ್ರಸಿದ್ಧರಾಗಿದ್ದರು. ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಕಂದಾವರ ಅವರ ಹುಟ್ಟೂರು.

ಶಿಕ್ಷಕರಾಗಿ, ಸಹಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸುಮಾರು 35 ವರ್ಷಗಳ ಅಧ್ಯಾಪನ ವೃತ್ತಿ ಮಾಡಿ ನಿವೃತ್ತರಾಗಿದ್ದರು. ಮಾದರಿ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದರು. ನಿವೃತ್ತಿಯ ಬಳಿಕ ನೂಜಾಡಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಅವರು ರಚಿಸಿರುವ ಹೆಚ್ಚಿನ ಪ್ರಸಂಗಗಳು ಈಗಲೂ ರಂಗದಲ್ಲಿ ಪ್ರದರ್ಶಿಸಲ್ಪಡುತ್ತಿವೆ.





















































 
 
error: Content is protected !!
Scroll to Top