ಅನಾರೋಗ್ಯದಿಂದ ಬೇಸತ್ತು ಯುವತಿ ಆತ್ಮಹತ್ಯೆ

ಪುತ್ತೂರು: ಅನಾರೋಗ್ಯದ ಕಾರಣಕ್ಕೆ ಬೇಸತ್ತು ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೈಯ್ಯೂರಿನಲ್ಲಿ ನಡೆದಿದೆ.

ನೀತಾ (22) ಎಂಬ ಯುವತಿಯೇ‌ ಮೃತ ದುರ್ದೈವಿ.

ತಾಯಿ ಮತ್ತು ಅಕ್ಕನ ಜೊತೆ ವಾಸಿಸುತ್ತಿದ್ದ ನೀತಾ‌ರಿಗೆ ಕೆಲ‌ಸಮಯದಿಂದ ಆರೋಗ್ಯ ಸಮಸ್ಯೆ ಕಾಡುತ್ತಿತ್ತು. ಇದಕ್ಕೆ ಚಿಕಿತ್ಸೆ ಸಹ ಪಡೆಯುತ್ತಿದ್ದರು.





















































 
 

ನೀತಾ ಅವರ ಅಕ್ಕ ಕೆಲಸದ ನಿಮಿತ್ತ ಮತ್ತು ನೀ ತಾ ಅವರಿಗೆ ಔಷಧಿ ತರಲೆಂದು ಹೊರಹೋಗಿದ್ದ ಸಮಯದಲ್ಲಿ ಶಾಲನ್ನು ಕಿಟಕಿಯ ಸರಳಿಗೆ ಕಟ್ಟಿ ನೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಗೀತಾ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.

ಗೀತಾ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

error: Content is protected !!
Scroll to Top