ಪುತ್ತೂರು: ಹಿರೇಬಂಡಾಡಿ ಗ್ರಾಮದ ನಂದಿನಗರ ರಸ್ತೆ ಕಾಂಕ್ರಿಟೀಕರಣ ಹಾಗೂ ನೂತನ ರಸ್ತೆಗೆ ಶಿಲಾನ್ಯಾಸ ಕಾರ್ಯಕ್ರಮ ಶುಕ್ರವಾರ ನಡೆಯಿತು.
5 ಲಕ್ಷ ರೂ. ಕಾಂಕ್ರಿಟೀಕರಣ ಹಾಗೂ 35 ಲಕ್ಷ ರೂ. ಅಮನುದಾನದಲ್ಲಿ ನೂತನ ರಸ್ತೆಗೆ ಶಾಸಕ ಸಂಜೀವ ಮಠಂದೂರು ತೆಂಗಿನಕಾಯಿ ಒಡೆಯುವ ಮೂಲಕ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಹಾಗೆಯೇ ಈ ರಸ್ತೆಗೆ 35 ಲಕ್ಷ ರೂ. ಅನುದಾನ ಇಡಲಾಗಿದೆ. ಆದಷ್ಟು ಶೀಘ್ರ ರಸ್ತೆ ನಿರ್ಮಾಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ತೆರೆದುಕೊಳ್ಳಲಿ ಎಂದರು.
ಹಿರೇಬಂಡಾಡಿ ಪಂಚಾಯಿತಿ ಅಧ್ಯಕ್ಷೆ ಚಂದ್ರಾವತಿ, ಮಾಜಿ ಪಂಚಾಯಿತಿ ಅಧ್ಯಕ್ಷ ಸೌಕತ್, ಹಿರಿಯ ನಾಗರೀಕ ಪ್ರಕೋಷ್ಟದ ಉಮೇಶ್ ಶೆಣೈ, ಉಪ್ಪಿನಂಗಡಿ ಶಕ್ತಿ ಕೇಂದ್ರ ಸಹಸಂಚಾಲಕ, ಓ.ಬಿ.ಸಿ. ಮೋರ್ಚಾ ಮಹಾ ಶಕ್ತಿ ಕೇಂದ್ರ ಸಂಚಾಲಕ ಪ್ರಸಾದ್ ಭಂಡಾರಿ, ಗಣೇಶ್ ಭಂಡಾರಿ, ಕಿಶೋರ್ ಹರಿನಗರ, ಮೋಹನ್ ಗೌಡ, ಶಿವಾನಂದ ಮತ್ತಿತರರು ಉಪಸ್ಥಿತರಿದ್ದರು.