ತಲವಾರ್ ಜಳಪಿಸುತ್ತಾ ಒಂದೇ ಬೈಕ್‌ನಲ್ಲಿ ಸಾಗುತ್ತಿದ್ದ ನಾಲ್ಕು ಮಂದಿ
ಮಂಗಳೂರು: ಬೈಕ್‌ನಲ್ಲಿ ತಲವಾರ್ ಹಿಡಿದು ಸಾಗುತ್ತಿದ್ದವರ ವಿಡಿಯೋ ಮಾಡಿದ್ದಕ್ಕೆ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆ ಮಂಗಳೂರು ಹೊರವಲಯದ ಬಜಪೆ ಸಮೀಪ ನಡೆದಿದೆ.
ಬಜಪೆ ಸಮೀಪದ ಪೂಪಾಡಿಕಲ್ಲು ನಿವಾಸಿ ಅಖಿಲೇಶ್ ಎಂಬವರ ಮೇಲೆ ನಾಲ್ವರು ಆರೋಪಿಗಳು ಹಲ್ಲೆ ನಡೆಸಿದ್ದಾರೆ. ಈ ಪೈಕಿ ಪೊಲೀಸರು ಓರ್ವ ಆರೋಪಿ ಸಿನಾನ್‌ನನ್ನು ಜನರೇ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಬಜಪೆ ಬಳಿ ನಾಲ್ವರು ಆರೋಪಿಗಳು ಒಂದೇ ಬೈಕ್‌ನಲ್ಲಿ ತಲವಾರ್ ಹಿಡಿದು ಸಾಗುತ್ತಿದ್ದರು. ಇದನ್ನು ನೋಡಿ ಅಖಿಲೇಶ್ ವಿಡಿಯೋ ಮಾಡಲು ಮುಂದಾಗಿದ್ದರು. ಇದನ್ನು ಕಂಡ ಆರೋಪಿಗಳು ಅಖಿಲೇಶ್ ಮೇಲೆ ತಲ್‌ವಾರ್‌ನಿಂದ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿ ಹೋಗುವಾಗ ಆರೋಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದು, ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸೆರೆಯಾದ ಆರೋಪಿಯನ್ನು ಸಿನಾನ್ ಎಂದು ಗುರುತಿಸಲಾಗಿದೆ. ಉಳಿದ ಮೂವರು ಆರೋಪಿಗಳ ಬಗ್ಗೆ ಆತ ಬಾಯಿಬಿಟ್ಟಿದ್ದು, ಅವರನ್ನೂ ಶೀಘ್ರ ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಲ್ಲೆಗೊಳಗಾದ ಯುವಕನಿಗೆ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನ ಹಿಡಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ವಿಡಿಯೋ ವೈರಲ್ ಆಗಿದೆ.
























