ವಿಟ್ಲ: ಮೂವರು ಮುಸುಕುಧಾರಿ ಖದೀಮರು ಪೆರುವಾಯಿಯ ಸೊಸೈಟಿ ಆವರಣದಿಂದ ನಾಲ್ಕು ಗೋವುಗಳನ್ನು ಕದ್ದೊಯ್ಯವ ದೃಶ್ಯ ಅಲ್ಲಿನ ಸಿಸಿ ಟಿವಿಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಗಣೇಶ್ ರೈ ಎಂಬವರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ.
ನ. 18 ರಂದು ನಾರಾಯಣ ನಾಯ್ಕ್ ಮತ್ತು ಗಣೇಶ್ ರೈ ಅವರ ದನಗಳು ಸೊಸೈಟಿ ಆವರಣದಲ್ಲಿ ಮೇಯುತ್ತಿದ್ದವು. ಸಂಜೆಯ ವೇಳೆ ಸೊಸೈಟಿ ನೌಕರರು ಹಸುಗಳನ್ನು ಅಲ್ಲೇ ಬಿಟ್ಟು ಗೇಟಿಗೆ ಬೀಗ ಹಾಕಿ ತೆರಳಿದ್ದರು. ಆ ಬಳಿಕ ಮೂವರು ಮುಸುಕುಧಾರಿಗಳು ಗೇಟಿನ ಬೀಗ ಮುರಿದು ಅಕ್ರಮವಾಗಿ ಪ್ರವೇಶಿಸಿ ದನಗಳನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
























