ದ್ವಿಚಕ್ರ ವಾಹನ ಕಳ್ಳತನ: ಇಬ್ಬರ ಬಂಧನ

ಬೆಳ್ತಂಗಡಿ: ಪಾನೂರು ಶ್ರೀ ಗುರು ನಾರಾಯಣ ವೃತ್ತದ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವೇಣೂರಿನ ‌ಮಹಮ್ಮದ್ ಇರ್ಷಾದ್ ಮತ್ತು ಪಡಂಗಡಿಯ ಸಾದಿಕ್ ಖಾನ್ ಬಂಧಿತ‌ ಆರೋಪಿಗಳು.

ಬೆಳ್ತಂಗಡಿ ಕುಕ್ಕೇಡಿಯ ಸಂಪತ್ ಕುಮಾರ್ ಎಂಬವರಿಗೆ ‌ಸೇರಿದ ವಾಹನ ಇದಾಗಿತ್ತು. ಆರೋಪಿಗಳಿಂದ ಪೊಲೀಸರು ಕದ್ದೊಯ್ದ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.





















































 
 
error: Content is protected !!
Scroll to Top