ಅಕ್ರಮವಾಗಿ ಕೆಂಪುಕಲ್ಲು ಸಾಗಾಟ: ಲಾರಿ ಪೊಲೀಸ್ ವಶಕ್ಕೆ, ಇಬ್ಬರ ವಿರುದ್ಧ ಪ್ರಕರಣ ದಾಖಲು

ಸುಳ್ಯ: ಯಾವುದೇ ಪರವಾನಗಿ ಹೊಂದಿದೆ ಮಡಿಕೇರಿಗೆ ‌ಕೇರಳದ ಕಡೆಯಿಂದ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಿಂಚಿಪದವು ಎಂಬಲ್ಲಿಂದ ಸುಮಾರು 400 ಕೆಂಪುಕಲ್ಲುಗಳನ್ನು ಹೇರಿಕೊಂಡು ಮಡಿಕೇರಿಯ ಕಡೆಗೆ ಲಾರಿ ಹೋಗುತ್ತಿತ್ತು. ಈ ಲಾರಿಯನ್ನು ಕಲ್ಲುಗುಂಡಿ ಹೊರಠಾಣೆಯ ಸಮೀಪ ಪೊಲೀಸರು ಪರಿಶೀಲನೆ ನಡೆಸಿದಾಗ ಪರವಾನಗಿ ಇಲ್ಲದಿರುವುದು ಗೊತ್ತಾಗಿದೆ. ತಕ್ಷಣವೇ ಕಲ್ಲುಗುಂಡಿ ಹೊರಠಾಣಾ ಪೊಲೀಸರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣವೇ ಸ್ಥಳಕ್ಕಾಗಮಿಸಿದ ಸುಳ್ಯ ಪೊಲೀಸರು ಅಕ್ರಮವಾಗಿ ಕಲ್ಲು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಸೈಯದ್ ಮತ್ತು ವಾಹನದ ಮಾಲೀಕ ಶೇಷಪ್ಪ ಪೂಜಾರಿ ವಿರುದ್ಧ ಪ್ರಕರಣ ದಾಖಲಾಗಿದೆ.





















































 
 
error: Content is protected !!
Scroll to Top