ತುಂಗಾ ನದಿಯಲ್ಲಿ ಬಾಂಬ್‌ ಸ್ಫೋಟಿಸಿದ ಇಬ್ಬರು ಐಸಿಸ್‌ ಉಗ್ರರಿಗೆ ಜೈಲು ಶಿಕ್ಷೆ

ನದಿಯಲ್ಲಿ ಪ್ರಾಯೋಗಿಕವಾಗಿ ಸ್ಫೋಟ ನಡೆಸಿದ್ದ ಉಗ್ರರು

ಶಿವಮೊಗ್ಗ: ತುಂಗಾ ನದಿ ದಂಡೆ ಮೇಲೆ ಪ್ರಾಯೋಗಿಕ ಸ್ಫೋಟ ಮತ್ತು ಹಿಂದೂ ಯುವಕನಿಗೆ ಚಾಕು ಇರಿದ ಪ್ರಕರಣದ ಐಸಿಸ್ ಉಗ್ರ ಸಂಘಟನೆಯ ಇಬ್ಬರು ಸದಸ್ಯರಿಗೆ ಎನ್‌ಐಎ ಕೋರ್ಟ್ 6 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಶಿವಮೊಗ್ಗ ಮೂಲದ ಜಬೀವುಲ್ಲಾ ಹಾಗೂ ನದೀಂ ಫೈಜಲ್ ಶಿಕ್ಷೆಗೊಳಗಾದ ಆರೋಪಿಗಳು. ಆರೋಪಿಗಳಿಗೆ 6 ವರ್ಷಗಳ ಜೈಲು ಶಿಕ್ಷೆ ಜೊತೆಗೆ ತಲಾ 59,000 ರೂ. ದಂಡ ಕೂಡ ವಿಧಿಸಲಾಗಿದೆ.

4 ವರ್ಷಗಳ ಹಿಂದೆ ಆರೋಪಿಗಳು ಪ್ರಾಯೋಗಿಕ ಸ್ಫೋಟ ನಡೆಸಿದ್ದರು. ಸ್ವಾತಂತ್ರ‍್ಯ ದಿನಾಚರಣೆ ದಿನ ಹಿಂದೂ ಯುವಕನಿಗೆ ಚಾಕುವಿನಿಂದ ಇರಿದಿದ್ದರು. 2022ರ ಆ.15 ರಂದು ರಾಜಸ್ಥಾನ ಮೂಲದ ಪ್ರೇಮ್ ಸಿಂಗ್ ಎಂಬಾತನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದರು. ಜೊತೆಗೆ ಭಾರತದ ಧ್ವಜ ಸುಟ್ಟ ಪ್ರಕರಣ ಸಂಬಂಧ ಇವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಆರೋಪಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿದೆ.





















































 
 
error: Content is protected !!
Scroll to Top