ಸುಳ್ಯ : ಕಾರು ಮೋರಿಗೆ ಗುದ್ದಿ ಮೂವರಿಗೆ ಗಾಯ

ಸುಳ್ಯ : ಕಾರು ರಸ್ತೆ ಬದಿಯ ಮೋರಿಗೆ ಗುದ್ದಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಶುಕ್ರವಾರ ಕನಕಮಜಲು ಸಮೀಪ ಕನ್ನಡ್ಕ ಎಂಬಲ್ಲಿ ನಡೆದಿದೆ.

ಕಾರು ಚಾಲಕ ಮಂಡೆಕೋಲಿನ ಖಲೀಲ್ ಸಹಿತ ಮೂವರು ಗಾಯಗೊಂಡಿದ್ದಾರೆ. ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಗುದ್ದಿದೆ.

ಗಾಯಾಳುಗಳನ್ನು ಕೂಡಲೇ ಆಟೊ ರಿಕ್ಷಾದಲ್ಲಿ ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು.





















































 
 
error: Content is protected !!
Scroll to Top