ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ: ಲಕ್ಷ ದೀಪೋತ್ಸವ ಸಂಪನ್ನ

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಶ್ರೀ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನ. 19 ರಂದು ರಾತ್ರಿ ಲಕ್ಷ ದೀಪೋತ್ಸವ ನಡೆಯಿತು.

ದೇಗುಲದ ಗೋಪುರದಿಂದ ಕಾಶಿಕಟ್ಟೆಯವರೆಗೆ ಹಣತೆಗಳನ್ನು ಬೆಳಗಲಾಯಿತು. ರಥಬೀದಿಯು ದೀಪಗಳ ಬೆಳಕಿನಲ್ಲಿ ದಿವ್ಯವಾಗಿ ಕಂಗೊಳಿಸಿತು. ದೇವಸ್ಥಾನ, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ರಥಬೀದಿ, ಅಭಯ ಆಂಜನೇಯ ಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್ ರಸ್ತೆ ಹಾಗೂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಲಕ್ಷಾಂತರ ಹಣತೆಗಳನ್ನು ಬೆಳಗಿಸಲಾಯಿತು.

ಮಹಾಪೂಜೆಯ ಬಳಿಕ ಹೊರಾಂಗಣ ಉತ್ಸವ ನಡೆಯಿತು. ಈ ವೇಳೆ ಕಾಚುಕುಜುಂಬ ದೈವವು ಶ್ರೀ ದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ಬಳಿಕ ಆಕರ್ಷಕ ದೀಪಗಳ ನಡುವೆ ಶೇಷವಾಹನಯುಕ್ತ ಬಂಡಿ ಉತ್ಸವ, ಪಾಲಕಿ ಉತ್ಸವ ಮತ್ತು ವಾದ್ಯಗಳ ಸೇವೆಯೊಂದಿಗೆ ದೇವರು ರಥಬೀದಿ ಪ್ರವೇಶಿಸಿದರು. ನಂತರ ಚಂದ್ರಮಂಡಲ ರಥದಲ್ಲಿ ಆರೂಢರಾದ ಸುಬ್ರಹ್ಮಣ್ಯ ದೇವರು ಭಕ್ತರಿಗೆ ದರ್ಶನ ನೀಡಿದರು. ದೇಗುಲದಿಂದ ಕಾಶಿಕಟ್ಟೆಯವರೆಗೆ ನಡೆದ ಈ ಉತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.





















































 
 

ಲಕ್ಷದೀಪೋತ್ಸವದ ವಿಶೇಷವಾಗಿ ನೂರಾರು ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಿತು. ಖ್ಯಾತ ಗಾಯಕ ರವೀಂದ್ರ ಪ್ರಭು ಮತ್ತು ತಂಡದ ಭಜನೆ ಕಾರ್ಯಕ್ರಮಕ್ಕೆ ಮೆರುಗು ನೀಡಿತು.

error: Content is protected !!
Scroll to Top