ಮಾದಕ ದ್ರವ್ಯ ಸೇವನೆ: ಮಹಮ್ಮದ್ ಅನೀಸ್ ಪೊಲೀಸರ ಬಲೆಗೆ

ಪುತ್ತೂರು: ಯುವಕನೊಬ್ಬನನ್ನು ಮಾದಕ ದ್ರವ್ಯ ಸೇವನೆ ಆರೋಪದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೆಮ್ಮಿಂಜೆ ಮರೀಲ್ ನಿವಾಸಿ ಮಹಮ್ಮದ್ ಅನೀಸ್ (29) ಎಂಬಾತನೇ ಆರೋಪಿ.

ಪುತ್ತೂರು ನಗರ ಪೊಲೀಸ್ ಸಿಬ್ಬಂದಿ ರೌಂಡ್ಸ್‌ನಲ್ಲಿದ್ದ ಸಂದರ್ಭದಲ್ಲಿ ದರ್ಬೆ ಸಮೀಪ ಅನುಚಿತವಾಗಿ ವರ್ತಿಸುತ್ತಿದ್ದ ಅನೀಸ್ ಪೊಲೀಸರನ್ನು ಕಂಡೊಡನೆ ಓಡಿ ಹೋಗಲು ಯತ್ನಿಸಿದ್ದಾನೆ. ಆತನನ್ನು ಹಿಡಿದು ಪ್ರಶ್ನೆ ಮಾಡಿದಾಗ ಆತ ಅಮಲಿನಲ್ಲಿರುವುದು ಕಂಡುಬಂತು.





















































 
 

ಅದರಂತೆ ಆತನನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರ ಬಳಿ ಕರೆದೊಯ್ದು ಪರೀಕ್ಷೆ ನಡೆಸಿದಾಗ ಆತ ಅಮಲು ಪದಾರ್ಥ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top