ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ಸನ್ನಿಧಾನದಲ್ಲಿ ಮಕರವಿಳಕ್ಕು ಯಾತ್ರೆ ಆರಂಭವಾಗಿದ್ದು, ಭಕ್ತರ ದಂಡೇ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯಾತ್ರಿಕರ ಒಳಹರಿವು ನಿಯಂತ್ರಿಸುವ ನಿಟ್ಟಿನಲ್ಲಿ ಕೇರಳ ಹೈಕೋರ್ಟ್ ಸೂಚನೆಯೊಂದನ್ನು ನೀಡಿದೆ.
ದಿನದ ದರ್ಶನದ ಮಿತಿಯನ್ನು 75 ಸಾವಿರಕ್ಕೆ ಇಳಿಕೆ ಮಾಡಲಾಗಿದ್ದು, ಸ್ಪಾಟ್ ಬುಕ್ಕಿಂಗ್ ಅನ್ನು 5 ಸಾವಿರಕ್ಕೆ ಸೀಮಿತಗೊಳಿಸಿದೆ. ನ್ಯಾಯಾಲಯಕ್ಕೆ ನೀಡಲಾದ ಮಾಹಿತಿಯ ಪ್ರಕಾರ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ 1 ಲಕ್ಷ ದಾಟಿದ್ದು, ಹಲವರು ಸಮಯಕ್ಕೂ ಮುನ್ನವೇ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಭಕ್ತರ ದಂಡು ಕಡಿಮೆ ಮಾಡುವ ನಿಟ್ಟಿನಲ್ಲಿ, ಸುಗಮ ದರ್ಶನದ ಹಿನ್ನೆಲೆ ಈ ಸೂಚನೆ ನೀಡಿದೆ.
ಎರುಮೇಲಿ, ನೀಲಕ್ಕಲ್, ಪಂಬಾ, ವಂಡಿಪೆರಿಯಾರ್ ಮತ್ತು ಚೆಂಗನ್ನೂರ್ ರೈಲು ನಿಲ್ದಾಣಗಳಲ್ಲಿ ನಡೆಯುತ್ತಿರುವ ಒಟ್ಟು ಸ್ಪಾಟ್ ಬುಕಿಂಗ್‌ಗಳ ಸಂಖ್ಯೆ ಮೇಲೆ ತಿಳಿಸಿದ ಮಿತಿಯನ್ನು ಮೀರದಂತೆ ನೋಡಿಕೊಳ್ಳಲು ತಿರುವಾಂಕೂರು ದೇವಸ್ವಂ ಮಂಡಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
























