ಸ್ಕೂಟಿಗೆ ಕಾರು ಡಿಕ್ಕಿ : ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ: ಇಂಜಿನಿಯರಿಂಗ್‌ ವಿದ್ಯಾರ್ಥಿನಿಯರು ಸಂಚರಿಸುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿನಿ ಮೃತಪಟ್ಟು ಮತ್ತೋರ್ವ ವಿದ್ಯಾರ್ಥಿನಿ ಗಂಭೀರ ಗಾಯಗೊಂಡ ಘಟನೆ ಕಾವಳಕಟ್ಟೆ ಸಮೀಪದ ಎನ್.ಸಿ.ರೋಡ್ ಬಳಿ ಬುಧವಾರ ಸಂಭವಿಸಿದೆ. ಕಡಬ ನಿವಾಸಿ ಸುನಿಲ್ ಎಂಬವರ ಪುತ್ರಿ ಅನನ್ಯ (21) ಮೃತ ವಿದ್ಯಾರ್ಥಿನಿ. ಗುರುವಾಯನಕೆರೆ ನಿವಾಸಿ ಪೃಥ್ವಿ ರಾವ್ ಎಂಬವರು ಗಾಯಗೊಂಡಿದ್ದಾರೆ.

ಗಾಯಾಳು ವಿದ್ಯಾರ್ಥಿಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಇವರಿಬ್ಬರೂ ಮಂಗಳೂರಿನ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಪೂಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





















































 
 
error: Content is protected !!
Scroll to Top