ಪಾಲಕರಿಂದ ಉಗ್ರನಾಗುವಂತೆ ಒತ್ತಡ: ಬಾಲಕನಿಂದ ಪೊಲೀಸರಿಗೆ ದೂರು

ತಿರುವನಂತಪುರ: ತನ್ನನ್ನು ಉಗ್ರನಾಗುವಂತೆ ಪಾಲಕರು ಪೀಡಿಸುತ್ತಿರುವುದಾಗಿ ‌ಕೇರಳದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.

ತನ್ನ ತಾಯಿ ಮತ್ತು ಮಲತಂದೆ ಮತೀಯವಾದದ ವಿಡಿಯೋ‌ಗಳನ್ನು ತೋರಿಸಿ, ತನ್ನನ್ನು ಉಗ್ರಗಾಮಿಯಾಗುವಂತೆ ಒತ್ತಡ ಹೇರುತ್ತಿದ್ದಾರೆ ಎಂದು 16 ವರ್ಷದ ಹುಡುಗನೊಬ್ಬ ಪೊಲೀಸರ ಮೊರೆ ಹೋಗಿರುವುದಾಗಿದೆ. ಈತನ ದೂರನ್ನಾಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಪ್ರಕರಣವನ್ನು ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ದಾಖಲು ಮಾಡಿಕೊಳ್ಳಲಾಗಿದೆ. ಬಾಲಕನ ದೂರನ್ನು ಪರಿಶೀಲಿಸಿ, ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.





















































 
 
error: Content is protected !!
Scroll to Top