ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ: ದೇವಿನಗರದಲ್ಲಿ ಮಲ್ಲಿಗೆ ಕೃಷಿ ತರಬೇತಿ

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಳಿಕೆ ವಲಯ ಮಟ್ಟದ ಮಲ್ಲಿಗೆ ಕೃಷಿ ತರಬೇತಿ ಕಾರ್ಯಕ್ರಮವನ್ನು ದೇವಿನಗರ ವತ್ಸಲಾ ನಾಯಕ್ ಅವರ ಮನೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ತೋರಕಟ್ಟೆ ಒಕ್ಕೂಟದ ಅಧ್ಯಕ್ ರಘು ನಾಯ್ಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ವತ್ಸಲಾ ನಾಯಕ್ ಮಲ್ಲಿಗೆ ಕೃಷಿ ನಾಟಿ ಮತ್ತು ಮಲ್ಲಿಗೆಯ ಗಿಡದ ಹುಳುಗಳ ಹಾವಳಿಯನ್ನು ನಾಶಮಾಡುವುದನ್ನು ವಿವರಿಸಿ ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ಐತಪ್ಪ ಪೂಜಾರಿ ಅವರು ಸ್ವಉದ್ಯೋಗ ಮಾಡುವ ಬಗ್ಗೆ ಮಾಹಿತಿ ನೀಡಿದರು.





















































 
 

ಮೇಲ್ವಿಚಾರಕಿ ಮೀನಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಒಕ್ಕೂಟದ ಕಾರ್ಯದರ್ಶಿ ಅಮಿತ ಸ್ವಾಗತಿಸಿ, ಸದಸ್ಯೆ ರೇಖರವರು ವಂದಿಸಿದರು. ಸೇವಾಪ್ರತಿನಿಧಿ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು. 34 ಸದಸ್ಯರು ಇದರ ಪ್ರಯೋಜನವನ್ನು ಪಡೆದರು.

error: Content is protected !!
Scroll to Top