ಬಿಹಾರ ಫಲಿತಾಂಶ : ಪಕ್ಷಗಳ ಅಂತಿಮ ಬಲಾಬಲ

200 ದಾಟಿ ಇತಿಹಾಸ ನಿರ್ಮಿಸಿದ ಎನ್‌ಡಿಎ ಮೈತ್ರಿಕೂಟ

ಪಾಟ್ನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಐತಿಹಾಸಿಕ ಜಯ ಸಾಧಿಸಿದೆ. ಎಲ್ಲ ಎಕ್ಸಿಟ್‌ ಪೋಲ್‌ಗಳನ್ನು ತಲೆಕೆಳಗು ಮಾಡಿ ಮತ್ತೆ ಅಧಿಕಾರಕ್ಕೇರಿದೆ. ಎನ್‌ಡಿಎ 202, ಮಹಾಘಟಬಂಧನ್‌ 35 ಹಾಗೂ ಇತರ 6 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ.

ಕಾಂಗ್ರೆಸ್ ಎಂದಿನಂತೆ ಹೇಳೋಕೆ ಹೆಸರಿಲ್ಲದಂತೆ ನೆಲಕಚ್ಚಿದೆ. ಕಾಂಗ್ರೆಸ್ ಪಕ್ಷವನ್ನು ನೆಚ್ಚಿಕೊಂಡ ಆರ್‌ಜೆಡಿ ಮಣ್ಣು ಮುಕ್ಕಿದೆ. ಮತಪಟ್ಟಿ ಪರಿಷ್ಕರಣೆಗೆ ವಿರೋಧ, ಮತಕಳವು ಆರೋಪ, ಅತ್ಯಧಿಕ ಮತದಾನ, ಶೇ.47ರಷ್ಟು ಮಹಿಳಾ ಮತದಾರರಿಂದ ವೋಟಿಂಗ್ ದಾಖಲೆಗಳ ವಿಶೇಷತೆ ನಡುವೆ ನಡೆದ ಬಿಹಾರ ಎಲೆಕ್ಷನ್‌ನಲ್ಲಿ ಎನ್‌ಡಿಎ ಕೂಟ ಕಮಾಲ್ ಮಾಡಿದೆ. ಈ ಮೂಲಕ ನಿತೀಶ್ ಕುಮಾರ್-ನರೇಂದ್ರ ಮೋದಿ ಜೋಡಿ ಮೋಡಿ ಮಾಡಿ ಅಧಿಕಾರಕ್ಕೆ ಬಂದಿದೆ. ಈ ಬಾರಿ ಚಮತ್ಕಾರ ಮಾಡಿಯೇ ತೀರುತ್ತೇವೆ ಅಂತ ಗ್ಯಾರಂಟಿಗಳ ಮೇಲೆ ಗ್ಯಾರಂಟಿಗಳನ್ನು ಘೋಷಿಸಿದ್ದ ತೇಜಸ್ವಿ ಯಾದವ್-ರಾಹುಲ್ ಗಾಂಧಿ ಮಾತುಗಳಿಗೆ ಬಿಹಾರಿಗಳು ಮಣೆ ಹಾಕಿಲ್ಲ.





















































 
 

ಎನ್‌ಡಿಎ ಬರೀ ಜಯ ಅಲ್ಲ, ಪ್ರಚಂಡ ಜಯದೊಂದಿಗೆ ಕ್ಲೀನ್‌ಸ್ವೀಪ್ ಮಾಡಿದೆ. ರಾಹುಲ್ ಗಾಂಧಿ ಶೇ.100 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರೂ, ಕೇವಲ ನಾಲ್ಕರಲ್ಲಿ ಮಾತ್ರ ಗೆದ್ದಿದೆ.

ಬಿಹಾರ ಅಂತಿಮ ಫಲಿತಾಂಶ ಹೀಗಿದೆ:

ಒಟ್ಟು ಕ್ಷೇತ್ರ 243 – ಸರಳ ಬಹುಮತ 122

ಎನ್‌ಡಿಎ 202 (+80) 2020ರಲ್ಲಿ 122
ಎಂಜಿಬಿ 35 (-79) 2020ರಲ್ಲಿ 114
ಜೆಎಸ್‌ಪಿ 0
ಇತರರು 6

ಪಕ್ಷವಾರು ಫಲಿತಾಂಶ
ಪಕ್ಷ ಜಯ ಸ್ಪರ್ಧೆ
ಬಿಜೆಪಿ 89 101
ಜೆಡಿಯು 85 101
ಎಲ್‌ಜೆಪಿ 19 29
ಎಚ್‌ಎಎಂ 5 5
ಆರ್‌ಎಲ್‌ಎಂ 4 5

ಆರ್‌ಜೆಡಿ 25 143
ಕಾಂಗ್ರೆಸ್ 6 61
ಎಂಐಎಂ 5 25

error: Content is protected !!
Scroll to Top