ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಶಾಂತಿಗೋಡು ಗ್ರಾಮ, ಸರ್ವೆ ಅಂಚೆ ಪುತ್ತೂರು ಇಲ್ಲಿನ ವಾರ್ಷಿಕೋತ್ಸವ ಪಿಎಂಶ್ರೀ ಸಡಗರ ನ. 15 ರಂದು ನಡೆಯಲಿದೆ.
ಬೆಳಗ್ಗೆ 9.30 ಕ್ಕೆ ಧ್ವಜವಂದನೆ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಧ್ವಜಾರೋಹಣವನ್ನು ರವಿಚಂದ್ರ (ಅಧ್ಯಕ್ಷರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ) ನಡೆಸಿ ಕೊಡಲಿದ್ದಾರೆ. ಬಹುಮಾನ ವಿತರಣೆಯನ್ನು ಅಮೃತಕಲಾ (ಶಿಕ್ಷಣ ಸಂಯೋಜಕರು ಪುತ್ತೂರು) ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಶುಭಾರಂಭವನ್ನು ಹರಿಪ್ರಸಾದ್ (ಶಿಕ್ಷಣ ಸಂಯೋಜಕರು ಪುತ್ತೂರು) ನಡೆಸಿಕೊಡಲಿದ್ದಾರೆ. ಪರಮೇಶ್ವರಿ (ಸಮೂಹ ಸಂಪನ್ಮೂಲ ವ್ಯಕ್ತಿ ನರಿಮೊಗರು) ಇವರು ವಹಿಸಲಿದ್ದಾರೆ.
ಸಂಜೆ ಗಂಟೆ 5 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಉಧ್ಘಾಟಿಸಲಿದ್ದಾರೆ. ನರಿಮೊಗರು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಬು ಶೆಟ್ಟಿ (ಸದಸ್ಯರು ಗ್ರಾಮ ಪಂಚಾಯತ್, ನರಿಮೊಗರು), ಪದ್ಮಾವತಿ (ಸದಸ್ಯರು ಗ್ರಾಮ ಪಂಚಾಯತ್ ನರಿಮೊಗರು), ವಸಂತಿ (ಸದಸ್ಯರು ಗ್ರಾಮ ಪಂಚಾಯತ್, ನರಿಮೊಗರು), ನವೀನ್ ಭಂಡಾರಿ (ಕಾರ್ಯನಿರ್ವಹಣಾಧಿಕಾರಿ, ತಾ.ಪಂ. ಪುತ್ತೂರು), ವಿಷ್ಣುಪ್ರಸಾದ್ ಸಿ (ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲಾ ಶಿಕ್ಷಣ ಇಲಾಖೆ ಪುತ್ತೂರು), ನವೀನ್ ಸ್ಟೀಫನ್ ವೇಗಸ್ (ಸಮನ್ವಯಾಧಿಕಾರಿಯವರು ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು), ಗೋಪಕುಮಾರ್ (ನಿವೃತ್ತ ರೈಲ್ವೆ ಇಂಜಿನಿಯರ್ ಆನಾಜೆ ವೀರಮಂಗಲ), ಶಿವರಾಮ ಭಟ್ ಭಾವ (ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವೀರಮಂಗಲ), ರಝಾಕ್ ವಿ ಎಸ್, (ಅಧ್ಯಕ್ಷರು ಬದ್ರಿಯಾ ಜುಮ್ಮಾ ಮಸೀದಿ ವೀರಮಂಗಲ), ದಾಮೋದರ ಕುಲಾಲ್ (ಮಾಜಿ ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ), ಬಾಬು ಪಳ್ಳತ್ತೋಡಿ (ಅಧ್ಯಕ್ಷರು ಶ್ರೀ ಆದಿ ನಾಗಬ್ರಹ್ಮ ಮುಗೆರ್ಕಳ ದೈವಸ್ಥಾನ) ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
























