ಬಿಹಾರ ಫಲಿತಾಂಶ: ಅಭೂತಪೂರ್ವ ಗೆಲುವಿನತ್ತ ಮುನ್ನುಗ್ಗುತ್ತಿರುವ ಎನ್‌ಡಿಎ; ಮಹಾಘಟಬಂಧನ್‌ ಮಹಾಪತನದತ್ತ

192 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ; ಕಾಂಗ್ರೆಸ್ಸಿನ ನಿರಾಶದಾಯಕ ಪ್ರದರ್ಶನ ಮುಂದುವರಿಕೆ

ಪಾಟ್ನಾ : ಬಿಹಾರದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗುತ್ತಿರುವಂತೆ ಕಾಣುತ್ತಿದೆ. ಎಲ್ಲ ಲೆಕ್ಕಾಚಾರಗಳನ್ನು ಮೀರಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ನಿಚ್ಚಳ ಬಹುಮತದತ್ತ ಮುನ್ನಗ್ಗುತ್ತಿದ್ದು, ನಿರಾಯಾಸವಾಗಿ ಅಧಿಕಾರವನ್ನು ಉಳಿಸುಕೊಳ್ಳುವತ್ತ ಹೆಜ್ಜೆಯನ್ನು ಹಾಕುತ್ತಿದೆ.

ಇದುವರೆಗಿನ ಟ್ರೆಂಡ್ ಪ್ರಕಾರ ಎನ್‌ಡಿಎ ಮೈತ್ರಿಕೂಟ ಪ್ರಚಂಡ ಗೆಲುವಿನತ್ತ ಸಾಗುತ್ತಿದೆ. ಇನ್ನೊಂದು ಕಡೆ, ಮಹಾಘಟಬಂಧನ್, ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ಸಿನ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ.





















































 
 

ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಎನ್‌ಡಿ 192 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎದುರಾಳಿ ಮಹಾಘಟಬಂಧನ್‌ ಕೇವಲ 48 ಕ್ಷೇತ್ರಗಳಲ್ಲಿ ಮುಂದಿದ್ದು, ಹೀನಾಯ ಸೋಲಿನತ್ತ ಮುಖ ಮಾಡಿದೆ. 3 ಕ್ಷೇತ್ರಗಳಲ್ಲಿ ಇತರರ ಮುಂದಿದ್ದಾರೆ. ಸದ್ಯದ ಟ್ರೆ<ಡ್‌ ಪ್ರಕಾರ ಬಿಹಾರದಲ್ಲಿ ಎನ್‌ಡಿಎ ಏಕಪಕ್ಷೀಯ ಹೋರಾಟದಂತೆ ಕಾಣಿಸುತ್ತಿದೆ.

ಕಳೆದ ಬಾರಿಯ ಅಂದರೆ 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹತ್ತೊಂಬತ್ತು ಸ್ಥಾನವನ್ನು ಗೆದ್ದಿತ್ತು. ಈ ಬಾರಿ, ಸದ್ಯದ ಟ್ರೆಂಡ್ ಪ್ರಕಾರ ಹನ್ನೆರಡು ಸ್ಥಾನದಲ್ಲಿ ಮಾತ್ರ ಮುನ್ನಡೆಯಲ್ಲಿದೆ. 61 ಸ್ಥಾನದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪಾರ್ಟಿಯ ವೋಟ್ ಚೋರಿ ಅಭಿಯಾನಕ್ಕೆ ಬಿಹಾರದ ಜನತೆ ಡೋಂಟ್ ಕೇರ್ ಅಂದಿದ್ದಾರೆ.

ಸುಶಾಸನ, ಭ್ರಷ್ಟಾಚಾರ ಮುಕ್ತ ಆಡಳಿತ, ಅಭಿವೃದ್ಧಿ ರಾಜಕಾರಣದಿಂದಾಗಿ ಜನಮನ್ನಣೆ ಗಳಿಸಿರುವ ನಿತೀಶ್ ಕುಮಾರ್ ಅವರ ನೇತೃತ್ವದ ಎನ್‌ಡಿಎ ಸರ್ಕಾರದ ಮುಂದೆ ಜಂಗಲ್ ರಾಜ್ ಕುಖ್ಯಾತಿಯ ಆರ್‌ಜೆಡಿ – ಕಾಂಗ್ರೆಸ್ ಮಹಾಘಟಬಂಧನ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ಪಕ್ಕಕ್ಕೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದಲೇ ರಾಹುಲ್ ಗಾಂಧಿ ಅವರು ಮುಖಭಂಗ ತಪ್ಪಿಸಿಕೊಳ್ಳಲು ವೋಟ್ ಚೋರಿ ಎಂಬ ಕಟ್ಟುಕಥೆ ಮೂಲಕ ಜನರನ್ನ ದಿಕ್ಕು ತಪ್ಪಿಸಲು ಹೊರಟಿದ್ದು ಎಂದು ಆರ್.ಅಶೋಕ ಟ್ವೀಟ್ ಮಾಡಿದ್ದಾರೆ.

ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಮ್ಯಾಜಿಕ್ ಬಿಹಾರದಲ್ಲಿ ಢಮಾರ್ ಆಗಿದೆ, ಆದರೆ ಮಹಾಘಟಬಂಧನ್‌ಗೆ ಬಲವಾದ ಹೊಡೆತ ಕೊಟ್ಟಿದ್ದಾರೆ.

2020ರಲ್ಲಿ ಚಿರಾಗ್‌ ಪಸ್ವಾನ್‌ ಎನ್‌ಡಿಎಗೆ ಮತಗಳನ್ನು ಕಸಿದಿದ್ದರು. ಆದರೆ ಈ ಬಾರಿ ಪ್ರಶಾಂತ್ ಕಿಶೋರ್ ಅವರ ಸೂರಜ್‌ ಪಕ್ಷ ಮಹಾಘಟ್‌ಬಂಧನ್‌ ಮತಗಳನ್ನು ಕಸಿದಿದೆ. ಪ್ರಶಾಂತ್‌ ಕಿಶೋರ್‌ ಅವರು ಚುನಾವಣೆಗೆ ಸ್ಪರ್ಧೆ ಮಾಡದೇ ಇದ್ದರೂ 240 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು.

2020ರಲ್ಲಿ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ ಪಕ್ಷ 135 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿ 1 ಕ್ಷೇತ್ರಗಳನ್ನು ಮಾತ್ರ ಗೆದ್ದಿತ್ತು. ಆದರೆ ಶೇ.5.8 ಮತಗಳನ್ನು ಪಡೆಯುವ ಮೂಲಕ ಎನ್‌ಡಿಎಗೆ ಬಲವಾದ ಹೊಡೆತ ನೀಡಿತ್ತು. ಆದರಲ್ಲೂ ಜೆಡಿಯು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಎಲ್‌ಜೆಪಿ ಸ್ಪರ್ಧಿಸಿತ್ತು.

ಲೋಕಸಭಾ ಚುನಾವಣಾ ಸಮಯದಲ್ಲಿ ಎಲ್‌ಜೆಪಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿತ್ತು. ಅಷ್ಟೇ ಅಲ್ಲದೇ ಚಿರಾಗ್‌ ಪಸ್ವಾನ್‌ ಅವರಿಗೆ ಮೋದಿ ಸಂಪುಟದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಕ್ಯಾಬಿನೆಟ್ ಸಚಿವ ಸ್ಥಾನ ನೀಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಎಲ್‌ಜೆಪಿಗೆ 29 ಸ್ಥಾನ ನೀಡಲಾಗಿದೆ.

error: Content is protected !!
Scroll to Top