ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಬೆಂಬಲ: ಹತ್ತು ಕಂಬಳ ಕೂಟಗಳಿಗೆ ತಲಾ 5 ಲಕ್ಷ ರೂ. ಅನುದಾನ

ಪುತ್ತೂರು: ಕರಾವಳಿ ಜಿಲ್ಲೆಗಳ ಜಾನಪದ ಕ್ರೀಡೆಯಾದ ಕಂಬಳಕ್ಕೆ ರಾಜ್ಯ ಸರ್ಕಾರ ಕೊಡುಗೆ ನೀಡಿದ್ದು, 10 ಕಂಬಳ ಕೂಟಗಳಿಗೆ ‌ತಲಾ 5 ಲಕ್ಷ ರೂ. ಗಳಂತೆ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಮಾಹಿತಿ ನೀಡಿದ್ದಾರೆ.

ಈ ಅನುದಾನವನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಬಿಡುಗಡೆ ಮಾಡಲಾಗಿದೆ. ಪುತ್ತೂರು, ಉಪ್ಪಿನಂಗಡಿ, ಜಪ್ಪು, ಬಂಟ್ವಾಳ, ಮೂಲ್ಕಿ, ವೇಣೂರು, ನರಿಂಗಾಣ, ಮಂಗಳೂರು, ಮೂಡಬಿದ್ರೆ, ಐಕಳ ಗಳಲ್ಲಿ ನಡೆಯುವ ಕಂಬಳಗಳಿಗೆ ‌ಸಂಬಂಧಿಸಿದ ಹಾಗೆ ಈ ಅನುದಾನ ಬಿಡುಗಡೆ ಮಾಡಲಾಗಿದೆ.

ಅಶೋಕ್ ರೈ ಅವರು ಈ ಹಿಂದೆ ಕಂಬಳಕ್ಕೆ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು ಎನ್ನುವುದು ಇಲ್ಲಿ ಗಮನಾರ್ಹ.





















































 
 
error: Content is protected !!
Scroll to Top