ಗಣರಾಜ್ಯೋತ್ಸವ ಉಗ್ರರ ಟಾರ್ಗೆಟ್‌

ಜ.26ರಂದು ದಿಲ್ಲಿಯಲ್ಲಿ ಭಾರಿ ವಿಧ್ವಂಸಕ ಕೃತ್ಯ ಎಸಗಲು ಸಂಚು ಮಾಡಿದ್ದರು ಉಗ್ರರು

ನವದೆಹಲಿ : ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕೆಂಪುಕೋಟೆ ಸೇರಿದಂತೆ ದೆಹಲಿಯಲ್ಲಿ ಬೃಹತ್‌ ಮಟ್ಟದ ಸ್ಫೋಟ ನಡೆಸುವುದು ಉಗ್ರರ ಸಂಚಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕೆಂಪುಕೋಟೆ ಸಮೀಪ ನವೆಂಬರ್ 10ರಂದು ಕಾರಿನಲ್ಲಿದ್ದ್‌ ಬಾಂಬ್‌ ಸ್ಫೋಟ ಗೊಂಡು 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎನ್​ಐಎ ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಬ್ಬರು ಶಂಕಿತರ ವಿಚಾರಣೆ ನಡೆಸುವಾಗ ಹಲವು ವಿಚಾರಗಳು ಬಹಿರಂಗಗೊಂಡಿವೆ.

ದೆಹಲಿ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಡಾ.ಮುಜಾಮಿಲ್ ಆ ಪ್ರದೇಶದಲ್ಲಿ ನಡೆದ ಸ್ಫೋಟಕ್ಕೂ ಮೊದಲು ಡಾ.ಮೊಹಮ್ಮದ್‌ ಉಮರ್ ಜೊತೆಗೆ ಕೆಂಪುಕೋಟೆಯಿಂದ ಹಿಂದಿರುಗಿ ಬಂದಿದ್ದರು. ಮೊದಲು ಕೆಂಪುಕೋಟೆಯನ್ನು ಗುರಿಯಾಗಿಸಿ ದಾಳಿ ಮಾಡುವ ಯೋಜನೆಯಿತ್ತು ಹಾಗಾಗಿ ಹಲವು ಬಾರಿ ಕೆಂಪುಕೋಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿದ್ದರು.





















































 
 

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನದಟ್ಟಣೆ ಇರುವ ಸ್ಥಳದ ಮೇಲೆ ದಾಳಿ ಮಾಡುವ ಯೋಜನೆಯಿತ್ತು. ಆದರೆ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ. ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಡಾ.ಮುಜಮ್ಮಿಲ್ ಮತ್ತು ಡಾ.ಉಮರ್ ಸಹೋದ್ಯೋಗಿಗಳಾಗಿದ್ದರು. ಡಾ.ಉಮರ್‌ ಸೋಮವಾರ ಸಂಭವಿಸಿದ ಕಾರು ಸ್ಫೋಟದಲ್ಲಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.

ಎನ್​ಐಎ ತಂಡ ಇದರ ಹಿಂದೆ ಪಾಕಿಸ್ತಾನ ಅಥವಾ ಬೇರೆ ಯಾರಾದರೂ ಇದ್ದಾರೆಯೇ ಎಂದು ಕಂಡುಹಿಡಿಯಲು ಪ್ರತಿಯೊಂದು ಅಂಶವನ್ನು ಪರಿಶೀಲಿಸುತ್ತದೆ. ಭಯೋತ್ಪಾದಕರ ಯೋಜನೆ ದೊಡ್ಡದಾಗಿತ್ತು. ದೀಪಾವಳಿ ಹಬ್ಬದಂದು ದೆಹಲಿಯನ್ನು ಭಯಗೊಳಿಸಲು ದುಷ್ಟ ಶಕ್ತಿಗಳು ಸಂಚು ರೂಪಿಸಿದ್ದವು. ನಂತರ ಅದನ್ನು ಗಣರಾಜ್ಯೋತ್ಸವ ದಿನಕಕೆ ಮುಂದೂಡಲಾಗಿತ್ತು.

ದೀಪಾವಳಿಯ ಸಂಚು ವಿಫಲವಾದ ನಂತರ, ಭಯೋತ್ಪಾದಕರು ಅಂದರೆ ಗಣರಾಜ್ಯೋತ್ಸವವನ್ನು ಆರಿಸಿಕೊಂಡರು. ಆದರೆ ಅದಕ್ಕೂ ಮೊದಲು ಅಹಮದಾಬಾದ್, ಫರಿದಾಬಾದ್ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಕೈಕೊಂಡ ತ್ವರಿತ ಕ್ರಮವು ಈಸಂಚನ್ನು ಬಯಲು ಮಾಡಿದೆ.
ಇದರ ನಂತರ ಬಂಧನಕ್ಕೆ ಹೆದರಿ ಭಯೋತ್ಪಾದಕ ಡಾ. ಮೊಹಮ್ಮದ್ ಉಮರ್ ಈ ಯೋಜನೆಯನ್ನು ರೂಪಿಸಿ ಕೆಂಪುಕೋಟೆಯ ಬಳಿ ಸ್ಫೋಟ ಎಸಗಿದ್ದಾನೆ.

error: Content is protected !!
Scroll to Top