ಭಾರತ್ ಸಿನಿಮಾಸ್‌ನಲ್ಲಿ ‌ನಡೆಯಿತು ಮಾಹಿ ಚಿತ್ರದ ಪ್ರೀಮಿಯರ್ ಶೋ

ಪುತ್ತೂರು: ಮಾಹಿ ಚಿತ್ರದ ಪ್ರಥಮ ಪ್ರಿಮಿಯರ್ ಶೋ ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಭಾನುವಾರ ಮದ್ಯಾಹ್ನ 2:00 ಗಂಟೆಯಿಂದ 7:00 ಗಂಟೆವರೆಗೆ ನಡೆಯಿತು.

ಒಟ್ಟು ನಾಲ್ಕು ಶೋ ಗಳು ನಡೆದಿದ್ದು ಇದರಲ್ಲಿ ಎಲ್ಲಾ ಶೋ ಗಳು ಕೂಡ ಭರ್ತಿಯಾಗಿದ್ದವು. ಈ ನಾಲ್ಕೂ ಶೋ ಗಳಲ್ಲಿ ಅತಿಥಿ ಅಭ್ಯಾಗತರಾಗಿ ಅನೇಕ ಗಣ್ಯರು ಆಗಮಿಸಿದ್ದರು.

ವಿಜಯ್ ಸಾಮ್ರಾಟ್ ಸಹಜ್ ರೈ, ಹಿಂದೂ ನಾಯಕ ಅರುಣ್ ಪುತ್ತಿಲ, ಪ್ರಸಿದ್ಧ ಚಲನಚಿತ್ರ ನಟ ಎಂ ಕೆ ಮಠ, ಬೆಟ್ಟಂಪಾಡಿ ಮಹಾಲಿಂಗೇಶ್ವರ ದೇವಸ್ಥಾನದ ಅನುವoಶೀಯ ಮುಖ್ಯಸ್ಥ ವಿನೋದ್ ಕುಮಾರ್ ರೈ, ಸುದ್ದಿಬಿಡುಗಡೆ ಸಂಪಾದಕಿ ಹೇಮಾ ಜಯರಾಮ್ ರೈ, ಚಲನಚಿತ್ರ ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ಚಲನಚಿತ್ರ ವಿತರಕ ಬಾಲಕೃಷ್ಣ ಶೆಟ್ಟಿ, ಗಜಾನನ ಶಾಲೆಯ ಸಂಚಾಲಕ ಅಚ್ಚುತ ಮೂಡಿತ್ತಾಯ, ತುಳುನಾಡ ವಾರ್ತೆ ಯ ಸಂಚಾಲಕಮಪುನೀತ್,ಚಾವಡಿ ಪೇಜ್ ನ ಮುಖ್ಯಸ್ ಪ್ರಸಾದ್ ಕುಮಾರ್, ಶ್ರೀನಾಥ್ ಡವಾರ್, ನಿವೃತ್ತ ಶಿಕ್ಷಕ ನಾರಾಯಣ್ ರೈ ಕುಕ್ಕುವಳ್ಳಿ, ಉಮೇಶ್ ನಾಯಕ್, ಸಾಯಿಶ್ರುತಿ ಪಿಲಿಕಜೆ, ಜೋಹನ್, ಹೇಮಾನಾಥ ಶೆಟ್ಟಿ ಕಾವು, ಕೃಷ್ಣಪ್ರಸಾದ್ ಆಳ್ವ, ವಿನೋದ್ ರೈ ಗುತ್ತು, ಭಾಗೇಶ್ ರೈ, ಪ್ರಸಾದ್ ಶಾನುಭೋಗ, ಜಯಂತ್ ನಡುಬೈಲು, ವಿಜಯ್ ಹರಿ ಮೊದಲಾದವರು ಉಪಸ್ಥಿತರಿದ್ದರು.





















































 
 

ಈ ಚಿತ್ರವನ್ನು ಕೀರ್ತನ್ ಶೆಟ್ಟಿ ನಿರ್ದೇಶಸಿ, ಅಜಿತ್ ಬಿ ಟಿ ನಿರ್ಮಾಣದಲ್ಲಿ, ಸುಪ್ರೀತ ಕೆ ಎಸ್, ಜೈದೀಪ್ ಕೊರಂಗ, ಹಿತಾಶ್ರೀ ಶೆಟ್ಟಿ ಇವರ ಸಹಬರಹದಲ್ಲಿ, ಪ್ರಶಾಂತ್ ಶೇಣಿಯವರ ಛಾಯಾಗ್ರಾಹಣದಲ್ಲಿ, ಶ್ರೀನಾಥ್ ಪಾವೂರ್ ಇವರ ಸಂಕಲನದಲ್ಲಿ, ರೋಹಿತ್ ಪೂಜಾರಿ ಇವರ ಸಂಗೀತದಲ್ಲಿ ಈ ಚಿತ್ರ ಮೂಡಿ ಬಂದಿದೆ. ಚಿತ್ರದ ಇನ್ನೊಂದು ಪ್ರಿಮಿಯರ್ ಶೋ ಸದ್ಯದಲ್ಲೇ ಆಯೋಜಿಸಲಾಗುವುದು ಎಂದು ಚಿತ್ರತಂಡ ಮಾಹಿತಿ ನೀಡಿದೆ.

error: Content is protected !!
Scroll to Top