ಹರಿಯಾಣದಲ್ಲಿ ಸಿಕ್ಕಿದ್ದು ಬಾಂಬ್‌ ತಯಾರಿಸಲು ಬಳಸುವ 360 ಕೆ.ಜಿ. ಅಮೋನಿಯಂ ನೈಟ್ರೇಟ್‌

ಮಹಿಳಾ ಡಾಕ್ಟರ್‌, ಇಮಾಮ್‌ ಸೇರಿ ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿರುವ ಪೊಲೀಸರು

ನವದೆಹಲಿ: ಹರಿಯಾಣದ ಫರಿದಾಬಾದ್‌ನಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ವಶಪಡಿಸಿಕೊಂಡಿರುವುದು ಆರ್‌ಡಿಎಕ್ಸ್‌ ಅಲ್ಲ ಬದಲಾಗಿ ಬಾಂಬ್‌ ತಯಾರಿಸಲು ಬಳಸುವ ಅಮೋನಿಯಂ ನೈಟ್ರೇಟ್‌ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಾಥಮಿಕ ವರದಿಗಳಲ್ಲಿ ಆರ್‌ಡಿಎಕ್ಸ್‌ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಲಾಗಿತ್ತು. ಸ್ಫೋಟಕದ ಜೊತೆಗೆ ರೈಫಲ್ ಹಾಗೂ ಮದ್ದುಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇತ್ತೀಚಿಗೆ ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಹಾಕಿದ್ದ ಹಿನ್ನೆಲೆ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಕಾಶ್ಮೀರಿ ಮೂಲದ ವೈದ್ಯ ಆದಿಲ್ ಅಹ್ಮದ್ ರಾಥರ್‌ನನ್ನು ಪೊಲೀಸರು ಬಂಧಿಸಿದ್ದರು. ಅದರ ಬೆನ್ನಲ್ಲೇ ಹರಿಯಾಣದ ಫರಿದಾಬಾದ್‌ನಲ್ಲಿ ಪೊಲೀಸರು 1 ಚೈನೀಸ್‌ ಸ್ಟಾರ್‌ ಪಿಸ್ತೂಲ್‌, 1 ಬೆರೆಟ್ಟಾ ಪಿಸ್ತೂಲ್‌, 1 ಎಕೆ 57 ರೈಫೆಲ್‌, 1 ಎಕೆ ಕ್ರಿಂಕೋವ್ ರೈಫೆಲ್‌, 369 ಕೆ.ಜಿಯಷ್ಟು ಅಮೋನಿಯಂ ನೈಟ್ರೇಟ್‌ ಸ್ಫೊಟಕ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಅಪಾಯಕಾರಿ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳು ಹರಿಯಾಣದ ಫರಿದಾಬಾದ್‌ನಲ್ಲಿರುವ ಅಲ್‌ ಫಲಾಹ್‌ ಮೆಡಿಕಲ್‌ ಕಾಲೇಜಿನಲ್ಲಿ ಉದ್ಯೋಗದಲ್ಲಿರುವ ಆರೋಪಿ ವೈದ್ಯ ಡಾ.ಮುಜಾಮಿಲ್‌ ಶಕೀಲ್‌ನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





















































 
 

ವೈದ್ಯ ಡಾ.ಮುಜಾಮಿಲ್‌ ಶಕೀಲ್‌ನ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಫರಿದಾಬಾದ್‌ನ ಮಸೀದಿಯೊಂದರ ಇಮಾಮ್‌ ಇಸ್ಕಿಯಾಕ್‌ಎಂಬಾತನನ್ನು ಪೊಲೀದಸರು ಬಂಧಿಸಿ ಪ್ರಶ್ನಿಸುತ್ತಿದ್ದಾರೆ. ಇದೇ ಮೆಡಿಕಲ್‌ಕಾಲೇಜಿನ ವೈದ್ಯಯೊಬ್ಬರ ಕಾರಿನಲ್ಲಿ ಕ್ಯಾರಮ್‌ ಕಾಕ್‌ ರೈಫಲ್‌ ಸಿಕ್ಕಿದ್ದು, ಈ ಹಿನ್ನೆಲೆಯಲ್ಲಿ ವೈದ್ಯೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ಫರಿದಾಬಾದ್‌ ಪೊಲೀಸ್‌ ಕಮಿಷನರ್‌ ಸತೇಂದರ್‌ ಕುಮಾರ್‌ ಗುಪ್ತಾ ಅವರ ಮಾಹಿತಿ ಪ್ರಕಾರ, ವಿಚಾರಣೆ ವೇಳೆ ಆರೋಪಿ ವೈದ್ಯ ಸ್ಫೋಟಕಗಳ ಕುರಿತು ಮಾಹಿತಿ ಬಹಿರಂಗಪಡಿಸಿದ್ದಾನೆ. ಈ ಸ್ಫೋಟಕಗಳನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮೂಲ ಮುಜಮ್ಮಿಲ್ ಶಕೀಲ್ ಎಂಬ ಇನ್ನೋರ್ವ ವೈದ್ಯ ಸಂಗ್ರಹಿಸಿದ್ದು, ಆರೋಪಿ ಮುಜಮ್ಮಿಲ್‌ನ್ನು ಸದ್ಯ ಬಂಧಿಸಲಾಗಿದೆ. ಈಗಾಗಲೇ ಆರೋಪಿ ರಾಥರ್ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು. ಸದ್ಯ ಈ ಸ್ಫೋಟಕಗಳ ಸಂಗ್ರಹಣೆ, ಸಾಗಾಣೆ ಹಿಂದಿನ ಜಾಲ ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ. ಇದು ಹರಿಯಾಣ ಹಾಗೂ ಜಮ್ಮು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಿಫ್ ನಿಸಾರ್ ದಾರ್, ಯಾಸಿರ್-ಉಲ್-ಅಶ್ರಫ್, ಮಕ್ಸೂದ್ ಅಹ್ಮದ್ ದಾರ್, ಮುಲ್ವಿ ಇರ್ಫಾನ್ ಅಹ್ಮದ್, ಜಮೀರ್ ಅಹ್ಮದ್ ಅಹಂಗರ್, ಮುಜಮ್ಮಿಲ್ ಅಹ್ಮದ್ ಗನೈ, ಡಾ. ಅದೀಲ್‌ನ್ನು ಬಂಧಿಸಲಾಗಿದೆ. ಇನ್ನೂ ಕೆಲವರ ಪಾತ್ರ ಬೆಳಕಿಗೆ ಬಂದಿದ್ದು, ಶೀಘ್ರದಲ್ಲೇ ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ಅ.27ರಂದು ಶ್ರೀನಗರದಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು. ಈ ಕುರಿತು ಸ್ಥಳೀಯ ಪೊಲೀಸರು ತನಿಖೆ ನಡೆಸಿದಾಗ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವೈದ್ಯ ಡಾ..ಆದಿಲ್ ಅಹ್ಮದ್ ರಾಥರ್ ಪೋಸ್ಟರ್ ಅಂಟಿಸುವುದು ಕಂಡುಬಂದಿತ್ತು. ಅದರ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ ತನಿಖೆ ವೇಳೆ ನೀಡಿದ್ದ ಮಾಹಿತಿ ಪ್ರಕಾರ, ಅನಂತ್‌ನಾಗ್ ಸರ್ಕಾರಿ ಕಾಲೇಜುವೊಂದರಲ್ಲಿ ರಾಥರ್ ಲಾಕರ್‌ನಿಂದ ಎಕೆ-47 ರೈಫಲ್ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.

error: Content is protected !!
Scroll to Top