ಡಾ.ರೇಣುಕಾಪ್ರಸಾದ್ ಕೆ.ವಿ. ಅವರಿಂದ ಬೆಳ್ಳಿ ರಥ ಸಮರ್ಪಣೆ

ಸುಬ್ರಹ್ಮಣ್ಯ: ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್ ಕಮಿಟಿ ‘ಬಿ’ ಇದರ ಅಧ್ಯಕ್ಷರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಡಾ. ರೇಣುಕಾಪ್ರಸಾದ್ ಕೆ.ವಿ. ಅವರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ಮಾಡಿದರು. ಭಕ್ತಿ ಸಂಭ್ರಮದ ಮಧ್ಯೆ ನ.10ರಂದು ಪೂ. 11ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ರಜತ ರಥ ಸಮರ್ಪಣೆ ಮಾಡಿದರು. ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರ ಕುಟುಂಬದವರು, ಪ್ರಮುಖರು ಸೇರಿ ಸಾವಿರಾರು ಮಂದಿ ದಿವ್ಯ ಮುಹೂರ್ತಕ್ಕೆ ಸಾಕ್ಷಿಗಳಾದರು. ಸೇವಾ ರೂಪದಲ್ಲಿ ಅವರು ಬೆಳ್ಳಿ ರಥ ಸಮರ್ಪಿಸಿದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ, ಮಾಜಿ ವಿಧಾನ ಸಭಾಪತಿ ಕೆ ಜಿ ಬೋಪಯ್ಯ, ಮಾಜಿ ಶಾಸಕ ಸಂಜೀವ ಮಠಂದೂರು, ವಿನಯ್ ಗುರೂಜಿ, ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೇಗೌಡ, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಬೆಳಗಾವಿ ವಿಟಿಯು ರಿಜಿಸ್ಟ್ರಾರ್ ಉಜ್ವಲ್ ಯು ಜೆ, ರಥ ಶಿಲ್ಪಿ ರಾಜಗೋಪಾಲಾಚಾರ್ಯ, ಪ್ರಮುಖರಾದ ನಿತ್ಯಾನಂದ ಮುಂಡೋಡಿ, ಎನ್.ಎ.ರಾಮಚಂದ್ರ, ಎಸ್.ಎನ್.ಮನ್ಮಥ,ಜಾಕೆ ಮಾಧವ ಗೌಡ, ಪಿ.ಎಸ್. ಗಂಗಾಧರ, ಪಿ.ಸಿ ಜಯರಾಮ, ದಿನೇಶ್ ಮಡಪ್ಪಾಡಿ, ಪ್ರಸನ್ನ ಕಲ್ಲಾಜೆ, ಬಿ.ಟಿ ಮಾಧವ, ಅಣ್ಣಯ್ಯ, ಭವಾನಿಶಂಕರ ಅಡ್ತಲೆ, ದಿನೇಶ್ ಮಡ್ತಿಲ, ಕಿರಣ್ ಬುಡ್ಡೆಗುತ್ತು, ಸಂತೋಷ್ ಜಾಕೆ, ಕಮಲಾಕ್ಷ ನಂಗಾರು, ಡಾ. ಸುರೇಶ್, ಡಾ. ಮನೋಜ್, ಡಾ. ಯಶೋದಾ ರಾಮಚಂದ್ರ, ಸೀತಾರಾಮ ಕೇವಳ, ನಾಗೇಶ್ ಕೆಡೆಂಜಿ, ಸುನೀಲ್ ಕೇರ್ಪಳ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಡಾ.ರಘು, ಲೀಲಾಮನಮೋಹನ್, ಪ್ರವೀಣ ಮರುವಂಜ ಸೇರಿದಂತೆ ಸಮಿತಿ ಸದಸ್ಯರು ಮಾಸ್ಟರ್ ಪ್ಲಾನ್ ಮೇಲ್ವಿಚಾರಣಾ ಸಮಿತಿ ಸದಸ್ಯರು, ನ್ಯೂಸ್ ಪುತ್ತೂರು ಇದರ ವರದಿಗಾರರು ಮತ್ತು ಅಧ್ಯಕ್ಷರು, ಕೆವಿಜಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಿಬ್ಬಂದಿಗಳು, ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿಗಳು, ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

error: Content is protected !!
Scroll to Top