ವಿಜೃಂಭಣೆಯಿಂದ ಜರುಗಿದ ಬೆಳ್ಳಿರಥ ಸಮರ್ಪಣೆಯ ಪೂರ್ವಭಾವಿ ಪೂಜೆ

ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯನಿಗೆ ಶ್ರದ್ಧಾಪೂರ್ವಕವಾಗಿ ಡಾ. ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಇಂದು ಸಮರ್ಪಿಸಲಿರುವ ಅತಿ ಸುಂದರವಾದ 18 ಅಡಿಗಳ ಎತ್ತರದ, ರೂ. ಎರಡು ಕೋಟಿಗೂ ಮಿಕ್ಕಿದ ಮೌಲ್ಯವುಳ್ಳ, ವಾಸ್ತುಶುದ್ಧಿಯುಳ್ಳ ಬೆಳ್ಳಿರಥಕ್ಕೆ ನಿನ್ನೆ ಸಂಜೆ ಗಂಟೆ 6ಕ್ಕೆ ಶುದ್ದಿ ಕಲಶ, ವಾಸ್ತುಪೂಜೆ, ವಾಸ್ತುಬಲಿ ಮತ್ತು ರಾಕ್ಷೋಘ್ನ ಹೋಮಗಳು ಪುರೋಹಿತವರ್ಯರಾದ ಎಡಪಡಿತ್ತಾಯರ ನೇತೃತ್ವದಲ್ಲಿ ನಡೆದವು.

ವಿಜಯ ಸಂಕೇಶ್ವರ ಹಾಜರ್
ಪೂರ್ವಭಾವಿ ವೈದಿಕ ವಿಧಿಗಳ ಸಂದರ್ಭದಲ್ಲಿ ಪ್ರಖ್ಯಾತ ಪತ್ರಕರ್ತರೂ, ಉದ್ಯಮಿಯವರೂ ಆಗಿರುವ ವಿಜಯ ಸಂಕೇಶ್ವರ ಭೇಟಿ ನೀಡಿ ಡಾ. RPಯವರಿಗೆ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬೃಹತ್ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದು ಶ್ರೀ ದೇವರ ಅನುಗ್ರಹಕ್ಕೆ ಪಾತ್ರರಾದರು.

ಇಂದು ಸಮರ್ಪಣೆ
ಇಂದು ದಿನಾಂಕ 10 ನವೆಂಬರ್ 2025ರಂದು ಬೆಳಿಗ್ಗೆ ಗಂಟೆ 7ರಿಂದ ಗಣಪತಿ ಹವನ, ಸುಬ್ರಹ್ಮಣ್ಯ ಹೋಮ, ಪವಮಾನ ಹೋಮ ಮುಂತಾದ ವೈದಿಕ ಕಾರ್ಯಗಳು ಪೂರ್ಣಾಹುತಿಗೊಂಡು ಪೂರ್ವಾಹ್ನ ಗಂಟೆ 11.00ಕ್ಕೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬೆಳ್ಳಿರಥ ಸಮರ್ಪಣೆ ನಡೆಯಲಿದೆ.





















































 
 

ಇಂದು ರಾತ್ರಿ ಪ್ರಥಮ ಬೆಳ್ಳಿರಥ ಸೇವೆ
ಐತಿಹಾಸಿಕ ಬೆಳ್ಳಿರಥಕ್ಕೆ ಇಂದು ರಾತ್ರಿ ಗಂಟೆ 8ಕ್ಕೆ ಸರಿಯಾಗಿ ಬೆಳ್ಳಿರಥದ ಸೇವಾಕರ್ತ ಡಾ. ರೇಣುಕಾಪ್ರಸಾದ್ ಮತ್ತು ಮನೆಯವರಿಂದ ಸರ್ವ ಪ್ರಥಮ ಬೆಳ್ಳಿರಥ ಸೇವೆ ನಡೆಯಲಿದೆ.

error: Content is protected !!
Scroll to Top