ಶಾಲಾ ಬಾಲಕಿಯರಿಗೆ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ಕೇಸ್‌

ಮಂಗಳೂರು: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಪ್ರಾಯದ ಇಬ್ಬರು ಬಾಲಕಿಯರಿಗೆ ಆಟೋರಿಕ್ಷಾ ಚಾಲಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಅಪ್ರಾಪ್ತ ಪ್ರಾಯದ ಮಗಳು ಹಾಗೂ ಮತ್ತೊಬ್ಬ ವಿದ್ಯಾರ್ಥಿನಿ ಸ್ಥಳೀಯ ಶಾಲೆಗೆ ಹೋಗುವಾಗ ಕೆಲವು ದಿನಗಳ ಹಿಂದೆ ಅವರು ಶಾಲೆಗೆ ತೆರಳುತ್ತಿದ್ದಾಗ, ಒಬ್ಬ ಅಪರಿಚಿತ ವ್ಯಕ್ತಿ ಆಟೋ ರಿಕ್ಷಾದಲ್ಲಿ ಹಿಂಬಾಲಿಸಿ ಕಿರುಕುಳ ನೀಡಿದ್ದಾನೆ ಎಂದು ಓರ್ವ ಬಾಲಕಿಯ ತಂದೆ ದೂರು ನೀಡಿದ್ದಾರೆ.

ಈ ಕಿರುಕುಳ ಮುಂದುವರಿದಿದ್ದು ಅ.8ರಂದು ಬೆಳಗ್ಗೆ ಅದೇ ವ್ಯಕ್ತಿ ಮತ್ತೆ ಆಟೋರಿಕ್ಷಾದಲ್ಲಿ ಬಂದು ಇಬ್ಬರು ಬಾಲಕಿಯರಿಗೆ ಕಿರುಕುಳ ನೀಡಿದ್ದಾನೆ. ನಂತರ ತನಿಖೆಯ ವೇಳೆ ಆ ಆಟೋ ಚಾಲಕ ಪ್ರಸಾದ್ ಎಂದು ತಿಳಿದುಬಂದಿದೆ. ಈ ಸಂಬಂಧ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2025, ಕಲಂ 78(2) BNS 2023 ಮತ್ತು ಸೆಕ್ಷನ್ 12 POCSO Act 2012 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





















































error: Content is protected !!
Scroll to Top