ಸೂರ್ಯ ಚೈತನ್ಯ ಶಿಕ್ಷಣ ಸಂಸ್ಥೆಗೆ ದತ್ತಿ ನಿಧಿಯ ಕೊಡುಗೆ

ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಮತ್ತು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಸ್ಕೂಲ್ ಕುತ್ಯಾರು ಆಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ವಿದ್ಯಾ ಭಾರತಿ ಶೈಕ್ಷಣಿಕ ಸಹ ಮಿಲನ 2025 ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಜರಗಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮಹಾಪೋಷಕರಾದ ಆನೆಗುಂದಿ ಸರಸ್ವತಿ ಪೀಠದ ಅನಂತ ಶ್ರೀ ವಿಭೂಷಿತ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ಸಂಸ್ಥೆಗೆ ರೂಪಾಯಿ ಒಂದುವರೆ ಲಕ್ಷದ ದತ್ತಿನಿಧಿಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಪೂಜ್ಯ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಇದರ ವಾರ್ಷಿಕ ಬಡ್ಡಿಯಿಂದ ಮುಂದಕ್ಕೆ ಪ್ರತಿ ವರ್ಷವೂ 8,9 ಮತ್ತು 10ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಮಾತಾ ಪಿತರಾದ ಕೀರ್ತಿಶೇಷ ಶ್ರೀಮತಿ ವಾರಿಜ ಆಚಾರ್ ಮತ್ತು ಕೆ. ಮೋನಪ್ಪ ಆಚಾರ್ಯ ಗೇರುಕಟ್ಟೆ ಇವರ ಸ್ಮರಣೆಯಲ್ಲಿ ಸಂಸ್ಥೆಯಲ್ಲಿ ಪ್ರಥಮವಾಗಿ ದತ್ತಿನಿಧಿಯನ್ನು ಸ್ಥಾಪಿಸಿದ ದಿವಾಕರ ಆಚಾರ್ಯ ಮತ್ತು ಭಾರತಿ ಯಂ. ಯಲ್ ದಂಪತಿಯನ್ನು ಪೂಜ್ಯ ಸ್ವಾಮಿಗಳು ಫಲ ಮಂತ್ರಾಕ್ಷತೆ ನೀಡಿ ಗೌರವಿಸಿದರು.





















































 
 

ಈ ಸಂದರ್ಭದಲ್ಲಿ ಆಸೆಟ್ ಅಧ್ಯಕ್ಷರಾದ ಬಿ.ಸೂರ್ಯಕುಮಾರ ಹಳೆಯಂಗಡಿ ಕಾರ್ಯದರ್ಶಿ ಗುರುರಾಜ್. ಕೆ ಮಂಗಳೂರು, ವಿದ್ಯಾ ಭಾರತಿಯ ಅಧ್ಯಕ್ಷರಾದ ಪಾಂಡುರಂಗ ಪೈ ಸಿದ್ದಾಪುರ, ಪ್ರಧಾನ ಕಾರ್ಯದರ್ಶಿ ಮಹೇಶ ಹೈಕಾಡಿ, ಆನೆಗುಂದಿ ಸಂಸ್ಥಾನ ಸರಸ್ವತಿ ಪೀಠ ಕುತ್ಯಾರಿನ ಪ್ರಧಾನ ಕಾರ್ಯದರ್ಶಿ ಎಂ ಬಿ ಲೋಕೇಶ್ ಆಚಾರ್ಯ, ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಅನಿತಾ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top