ಇಂಟರ್‌ಲಾಕ್‌ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ, ನಿರ್ವಾಹಕನಿಗೆ ಗಾಯ

ಸುಳ್ಯ: ಇಂಟರ್‌ಲಾಕ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ ಮತ್ತು ನಿರ್ವಾಹಕ ಗಾಯಗೊಂಡ ಘಟನೆ ಸುಳ್ಯ ಅಜ್ಜಾವರ ಗ್ರಾಮದ ಮುಳ್ಯ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಮುಳ್ಯದ ಯತೀಶ್ ಎಂಬವರ ಹೊಸ ಮನೆಯ ಅಂಗಳಕ್ಕೆ ಅಳವಡಿಸಲು ಇಂಟರ್‌ಲಾಕ್ ತುಂಬಿಕೊಂಡು ಹೋಗುತ್ತಿರುವಾಗ ಲಾರಿ ಪಲ್ಟಿಯಾಗಿದೆ.
ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕರಿಬ್ಬರು ಗಾಯಗೊಂಡಿದ್ದಾರೆ.

ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ನಿರ್ವಾಹಕ ನವೀನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.





















































 
 
error: Content is protected !!
Scroll to Top