ಬೆಳಗಾವಿ: ಕಬ್ಬಿನ ಬೆಲೆ ಟನ್‌ಗೆ ಮೂರೂವರೆ ಸಾವಿರ ರೂ. ಗಳಿಗೆ ಏರಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರು ಸರ್ಕಾರದ ವಿರುದ್ಧ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲಕರ ಜೊತೆಗೆ ತುರ್ತು ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮೂವತ್ತೆಂಟಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಮಾಲಕರು, ಆಡಳಿತ ಮಂಡಳಿಯ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಸಿಎಂ ಅವರು ಈ ಸಭೆಯಲ್ಲಿ ರೈತರಿಗೆ ಮಾಡಬಹುದಾದ ನ್ಯಾಯಯುತ ಬೆಲೆಗೆ ಸಂಬಂಧಿಸಿದ ಹಾಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
























