ಸುಬ್ರಹ್ಮಣ್ಯ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥವು ಕೋಟೇಶ್ವರದಿಂದ ಮೆರವಣಿಗೆಯ ಮೂಲಕ ನವೆಂಬರ್ 4ರಂದು ಹೊರಟಿದ್ದು ನಿನ್ನೆ ನವೆಂಬರ್ 5ಕ್ಕೆ ತನ್ನ ಗಮ್ಯಸ್ಥಾನವಾದ ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ತಲುಪಿತು.
ಕಟೀಲ್ ಮತ್ತು ಮುರುಳ್ಯ ಭಾಗಿ
ನಿನ್ನೆ ಪೂರ್ವಾಹ್ನ ಸುಳ್ಯದ ಕೆವಿಜಿ ಸರ್ಕಲ್ ಬಳಿ ಬೆಳ್ಳಿರಥದ ಭವ್ಯ ಮೆರವಣಿಗೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಪೂರ್ವ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಹಾಜರಿದ್ದು ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸುಳ್ಯ ಮತ್ತು ಸುತ್ತೂರಿನ ನೂರಕ್ಕೂ ಮಿಕ್ಕಿದ ಭಕ್ತಾದಿಗಳು ಹಾಜರಿದ್ದರು.
ಸುಬ್ರಹ್ಮಣ್ಯಕ್ಕೆ ಸಾಗುವ ದಾರಿಯುದ್ದಕ್ಕೂ ನೂರಾರು ಭಕ್ತಾದಿಗಳು ಬೆಳ್ಳಿರಥವನ್ನು ಅಪ್ಯಾಯವಾಗಿ ಸ್ವಾಗತಿಸಿ, ಪುಷ್ಪಾರ್ಚನೆಗೈದು ಬೀಳ್ಕೊಡುತ್ತಿದ್ದ ಭಕ್ತಿ-ಭಾವುಕ ದೃಶ್ಯಗಳು ಸಾಮಾನ್ಯವಾಗಿತ್ತು.
ನವಂಬರ್ 10ರಂದು ಸಮರ್ಪಣೆ
ನವಂಬರ್ 9ರಂದು ಸಂಜೆಯ ವೇಳೆ ಬೆಳ್ಳಿರಥಕ್ಕೆ ವಿವಿಧ ಪೂಜೆಗಳು ಸಂದಾಯವಾಗಲಿವೆ. ನವಂಬರ್ 10ರಂದು ಪೂರ್ವಾಹ್ನ ಗಂಟೆ 10ಕ್ಕೆ ಬೆಳ್ಳಿ ರಥ ಶಾಸ್ತ್ರೋಕ್ತವಾಗಿ ಶ್ರೀ ದೇವರಿಗೆ ಸಮರ್ಪಣೆಯಾಗಲಿದೆ.
ಮೊದಲ ಬೆಳ್ಳಿರಥ ಸೇವೆ
ನವಂಬರ್ 10ರಂದು ಸಂಜೆಯ ವೇಳೆಗೆ ಬೆಳ್ಳಿ ರಥೋತ್ಸವ ನಡೆಯಲಿದ್ದು ಡಾ ರೇಣುಕಾ ಪ್ರಸಾದ್ ಕೆ ವಿ ಮತ್ತು ಮನೆಯವರಿಂದ ಐತಿಹಾಸಿಕವಾದ ಪ್ರಥಮ ಬೆಳ್ಳಿರಥ ಸೇವೆ ನಡೆಯಲಿದೆ.
























