ಅಪ್ರಾಪ್ತ ವಯಸ್ಸಿನ ಮಗನಿಗೆ ಸ್ಕೂಟಿ ನೀಡಿದ ಮಹಿಳೆಗೆ 26 ಸಾವಿರ ರೂ. ದಂಡ

ಮಂಗಳೂರು : ಅಪ್ರಾಪ್ತ ವಯಸ್ಸಿನ ಮಗನಿಗೆ ಸ್ಕೂಟಿ ಚಲಾಯಿಸಲು ನೀಡಿದ ತಾಯಿಗೆ ಮಂಗಳೂರಿನ 4ನೇ ಜೆ.ಎಂ.ಎಪ್.ಸಿ ನ್ಯಾಯಾಲಯ 26,000 ರೂ. ದಂಡ ವಿಧಿಸಿ ಆದೇಶಿದೆ. ಕಳೆದ ಅಕ್ಟೋಬರ್ 10ರಂದು ಬೈಕಂಪಾಡಿಯಲ್ಲಿ ಹತಿಜಮ್ಮ ಎಂಬ ಮಹಿಳೆ ತನ್ನ ಅಪ್ರಾಪ್ತ ಮಗನಿಗೆ ಸ್ಕೂಟಿ ಚಲಾಯಿಸಲು ನೀಡಿದ್ದಾರೆ. ಈ ಬಗ್ಗೆ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನವೆಂಬರ್ 5ರಂದು ಈ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 4ನೇ ಜೆ.ಎಂ.ಎಪ್.ಸಿ ನ್ಯಾಯಾಲಯ, ಅಪ್ರಾಪ್ತ ಬಾಲಕನಿಗೆ ಸ್ಕೂಟಿ ಚಲಾಯಿಸಲು ನೀಡಿದ್ದಕ್ಕೆ ವಾಹನದ ಮಾಲೀಕರಿಗೆ 26,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.

error: Content is protected !!
Scroll to Top