ವಿಟ್ಲ: ಬ್ರಹ್ಮಶ್ರೀ ವಿವಿದ್ದೋದ್ದೇಶ ಸಹಕಾರಿ ಸಂಘ ಇದರ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಸಂಘದ ಕಚೇರಿಯಲ್ಲಿ ನಡೆಯಿತು.
ಅಧ್ಯಕ್ಷರಾಗಿ ಸಂಜೀವ ಪೂಜಾರಿ ನಿಡ್ಯ ಉಪಾಧ್ಯಕ್ಷರಾಗಿ ಬಾಬು ಕೊಪ್ಪಳ, ನಿರ್ದೇಶಕರುಗಳಾಗಿ ಡಾ. ಗೀತಪ್ರಕಾಶ್ ಎ., ರಾಘವ ಪೂಜಾರಿ, ಜಗದೀಶ್ ಪಾಣೆಮಜಲು, ಅಭಿಜಿತ್ ಜೆ., ಸಂಜೀವ ಪೂಜಾರಿ ಎಂ., ರವಿ ಬಿ. ಕೆ., ಮಾಧವ ಪೂಜಾರಿ, ಶ್ರೀಧರ ಬಿ., ಪ್ರಕಾಶ್ ಕೆ., ವನಿತಾ ಚಂದ್ರಹಾಸ ಮತ್ತು ಶ್ವೇತಾ ಪದ್ಮನಾಭ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿ ಮಂಗಳೂರಿನ ವಿಲಾಸ್ ಚುನಾವಣೆ ನಡೆಸಿಕೊಟ್ಟರು.
ಮುಖ್ಯಕಾರ್ಯನಿರ್ವಾಹಣಾಧಿಕಾರಿ ಜಯಂತ ಪಿ. ಉಪಸ್ಥಿತರಿದ್ದರು.
























