ಬೆಳ್ಳಿರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದಿಂದ ಸ್ವಾಗತ, ಗೌರವಾರ್ಪಣೆ

ಸುಳ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಡಾ. ಕೆ.ವಿ. ರೇಣುಕಾಪ್ರಸಾದ್ ಮತ್ತು ಅವರ ಕುಟುಂಬದರು ಹರಕೆಯಾಗಿ ಸಮರ್ಪಿಸಲಿರುವ ಬೆಳ್ಳಿರಥ ಯಾತ್ರೆಯು ನವೆಂಬರ್ 4ರಂದು
ಕೋಟೇಶ್ವರದಿಂದ ಸುಳ್ಯಕ್ಕೆ ಆಗಮಿಸಿತ್ತು.

ಈ ಸಂದರ್ಭದಲ್ಲಿ ಶ್ರೀರಾಮಪೇಟೆಗೆ ಆಗಮಿಸಿದ ರಥಕ್ಕೆ ಡಾ. ಕೆ.ವಿ. ಚಿದಾನಂದರ ಕುಟುಂಬದ ಪರವಾಗಿ
ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಷನ್‌ನ ಉಪಾಧ್ಯಕ್ಷೆ ಶ್ರೀಮತಿ ಶೋಭಾ ಚಿದಾನಂದ ಮತ್ತು ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಅವರ ನೇತೃತ್ವದಲ್ಲಿ ಅಕಾಡೆಮಿ ವತಿಯಿಂದ ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ನೀಡಲಾಯಿತು.

ಡಾ. ರೇಣುಕಾಪ್ರಸಾದ್ ಅವರಿಗೆ ಸುಗಂಧ ಪುಷ್ಪಮಾಲಿಕೆ
ಡಾ. ರೇಣುಕಾಪ್ರಸಾದ್ ಅವರಿಗೆ ಅಕ್ಷಯ್ ಕೆ.ಸಿ. ಅವರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಡಾ. ಜ್ಯೋತಿ ಆರ್, ಪ್ರಸಾದ್, ಮೌರ್ಯ ಆರ್ ಕುರುಂಜಿ, ಡಾ. ಅಭಿಜ್ಞಾ ಗೌತಮ್ ಮತ್ತಿತರರು ಉಪಸ್ಥಿತರಿದ್ದರು.





















































 
 

ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ, ನಿವೃತ್ತ ಪ್ರಾಂಶುಪಾಲ ಪ್ರೊ. ಕೆ.ವಿ. ದಾಮೋದರ ಗೌಡ, ಕುಕ್ಕೆ ಕ್ಷೇತ್ರದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲು ಸೇರಿ ಎಒಎಲ್‌ಇ ಶಿಕ್ಷಣ ಸಂಸ್ಥೆಗಳ ಪ್ರಮುಖರು ಹಾಜರಿದ್ದರು.

error: Content is protected !!
Scroll to Top