ಬೆಳ್ಳಿ ರಥದ ಮನೋಜ್ಞ ಪುತ್ತೂರು ಪುರಪ್ರವೇಶ

ಪುತ್ತೂರು: ಕರ್ನಾಟಕ ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ, ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ‘ಬಿ’ ಟೀಮ್ ನ ಅಧ್ಯಕ್ಷ ಡಾಕ್ಟರ್ ರೇಣುಕಾಪ್ರಸಾದ್ ಕೆ.ವಿ. ಮತ್ತು ಮನೆಯವರು ಮತ್ತು ಸುಳ್ಯದ ಗುತ್ಯಮ್ಮ ದೇವಿ ದೇವಸ್ಥಾನದ ಧರ್ಮದರ್ಶಿ ಆಗಿರುವ ಅಪ್ರತಿಮ ನಾಗಕ್ಷೇತ್ರದ ಒಡೆಯ ಶ್ರೀ ಸುಬ್ರಹ್ಮಣ್ಯೇಶರನಿಗೆ ಹರಕೆಯ ರೂಪದಲ್ಲಿ ಸಮರ್ಪಿಸಲಿರುವ ಬೆಳ್ಳಿರಥದ ಧರ್ಮಯಾತ್ರೆಯು ಅಕ್ಟೋಬರ್ 4ರ ಸಂಜೆ ಗಂಟೆ 6.30ಕ್ಕೆ ಪುತ್ತೂರಿನ ಪುರಪ್ರವೇಶ ಮಾಡಿತು.

ನೆಹರೂ ನಗರದಲ್ಲಿ ಸ್ವಾಗತ
ಸಾಲಂಕೃತ ಭವ್ಯ ವಾಹನದಲ್ಲಿ ನೂರಾರು ಸಂಖ್ಯೆಯ ವಾಹನಗಳೊಂದಿಗೆ ಕುಂದಾಪುರದ ಕೋಟೇಶ್ವರದಿಂದ ಆಗಮಿಸಿದ ಬೆಳ್ಳಿರಥವನ್ನು ನೆಹರೂ ನಗರದಲ್ಲಿ ಪುತ್ತೂರಿನ ಮಹಾಜನತೆ ಎದುರ್ಗೊಂಡು ಸ್ವಾಗತಿಸಿದರು. ಅಲ್ಲಿಂದ ಪುತ್ತೂರಿನ ಭಕ್ತಾಭಿಮಾನಿಗಳ ವಾಹನಗಳೊಂದಿಗೆ ತೆಂಕಿಲ ವಿವೇಕಾನಂದ ಶಾಲಾ ಬಳಿ ಬಂದ ಯಾತ್ರಾಜಾಥಾಕ್ಕೆ ಜೊತೆಯಾದುದು ಚೆಂಡೆ-ತಾಳಗಳ ಮೇಳ ಮತ್ತು ಸುಶ್ರಾವ್ಯ ಕಂಠದ ಮಹಿಳಾ ಭಜನಾ ತಂಡಗಳು. ನಡೆದು ಸಾಗುತ್ತಲೇ ಚೆಂಡೆ-ತಾಳಗಳೊಂದಿಗೆ ಮತ್ತು ಮಹಿಳಾಮಣಿಗಳ ಭಜನೆಗಳೊಂದಿಗೆ ಮುಂದುವರಿದ ಬೆಳ್ಳಿರಥ ಯಾತ್ರೆ ಒಕ್ಕಲಿಗ ಸಮುದಾಯ ಭವನದ ಬಳಿ ಸಮಾಗಮಗೊಂಡಿತು.

ಪೂರ್ವ ಶಾಸಕ ಸಂಜೀವ ಮಠಂದೂರು ಅವರಿಂದ ಪುಷ್ಪಾರ್ಚನೆ
ತೆಂಕಿಲಕ್ಕೆ ಆಗಮಿಸಿದ ಬೆಳ್ಳಿರಥಕ್ಕೆ ಪೂರ್ವ ಶಾಸಕ ಸಂಜೀವ ಮಠಂದೂರು ಅವರು ಪುಷ್ಪಾರ್ಚನೆಗೈದರು.
ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ನಿಯೋಜಿತ ಅಧ್ಯಕ್ಷ ಸುಂದರ ಗೌಡ ನಡುಬೈಲು, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವಾರಿಜಾ ಕಾಣಿಚ್ಚಾರ್ ವಿವಿಧ ಸಂಘಟನೆ ಮತ್ತು ಸಮುದಾಯಗಳ ಭಕ್ತರು ಹಾಜರಿದ್ದು, ಪುಷ್ಪಾರ್ಚನೆಗೈದು, ಪ್ರಸಾದ ಸ್ವೀಕಾರ ಮಾಡಿದರು.





















































 
 

ಡಾ. ರೇಣುಕಾಪ್ರಸಾದರ ಪೂರ್ತಿ ಕುಟುಂಬದ ಸಮಗ್ರ ಭಾಗವಹಿಸುವಿಕೆ
ಡಾ. ಕೆ. ವಿ. ರೇಣುಕಾಪ್ರಸಾದರ ಪತ್ನಿ ಡಾ. ಜ್ಯೋತಿ ಆರ್. ಪ್ರಸಾದ್, ಮಗ ಮೌರ್ಯ ಆರ್. ಪ್ರಸಾದ್, ಮಗಳು ಅಭಿಜ್ಞಾ ಗೌತಮ್ ಮತ್ತು ಅಳಿಯ ಗೌತಮ್ ಹಾಜರಿದ್ದರು. ಹಿಂದಿನ ದಿನ ಕೋಟೇಶ್ವರದಲ್ಲಿ ರಥವನ್ನು ಶಿಲ್ಪಿಗಳು ಹಸ್ತಾಂತರಿಸುವ ಕ್ಷಣದಿಂದ ಕೊನೆಯ ತನಕವೂ ಸಮಸ್ತ ಕುಟುಂಬ ತೀವ್ರ ಭಕ್ತಿ, ಆಸಕ್ತಿಗಳೊಂದಿಗೆ ಭಾಗವಹಿಸಿದ್ದು ವಿಶೇಷವಾಗಿತ್ತು.

error: Content is protected !!
Scroll to Top