ಡಾ. ರೇಣುಕಾಪ್ರಸಾದ್ ಕೊಡುಗೆಯ ಬೆಳ್ಳಿರಥ ಯಾತ್ರೆಗೆ ಚಾಲನೆ

ಕೋಟೇಶ್ವರ: ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಸುಳ್ಯದ ರೇಣುಕಾಪ್ರಸಾದ್ ಕುರುಂಜಿ ಮತ್ತು ಕುಟುಂಬದವರು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ದೇವರಿಗೆ ಸರ್ಪಿಸಲಿರುವ ಬೆಳ್ಳಿರಥದ ಯಾತ್ರೆಯ ಚಾಲನೆ ಸಮಯಕ್ಕೆ ಸರಿಯಾಗಿ ಕುಂಭಾಶಿಯ ವಿಶ್ವಕರ್ಮ ಕರಕುಶಲ ಮತ್ತು ಶಿಲ್ಪಕಲಾ ಕೇಂದ್ರದಲ್ಲಿ ನಡೆಯಿತು.

ಬೆಳಿಗ್ಗೆ ಗಂಟೆ 8ಕ್ಕೆ ಪೂಜಾ ವಿಧಿ ವಿಧಾನಗಳೊಂದಿಗೆ ಚಾಲನೆಗೊಂಡ ರಥ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಳಕ್ಕೆ ತೆರಳಿತು. ಅಲ್ಲಿ ಪೂಜೆಗೊಳ್ಳುವ ಸಂದರ್ಭದಲ್ಲಿ ಪೂರ್ವ ಸಂಸದ ವಿನಯ್ ಕುಮಾರ್ ಸೊರಕೆ ಹಾಜರಿದ್ದರು.

8.50ಕ್ಕೆ ಸರಿಯಾಗಿ ಕೋಟೇಶ್ವರದಿಂದ ರಥದ ಪ್ರಯಾಣ ಮುಂದುವರಿಯಿತು.





















































 
 

ಈ ಸಂದರ್ಭದಲ್ಲಿ ಸುಳ್ಯ ಮತ್ತು ಸುತ್ತೂರಿನ ನೂರಕ್ಕೂ ಮಿಕ್ಕಿದ ಭಕ್ತಾದಿಗಳು ಹಾಜರಿದ್ದರು.

error: Content is protected !!
Scroll to Top