ಬೆಂಗಳೂರು: ನಮ್ಮ ಮೆಟ್ರೋದಲ್ಲಿ ತಾಯಿಯಿಂದ ಬೇರೆಯಾಗಿದ್ದ 6 ವರ್ಷದ ಮಗು ಮರಳಿ ತಾಯಿಯ ಮಡಿಲು ಸುರಕ್ಷಿತವಾಗಿ ಸೇರಿದ ಘಟನೆ ನಡೆದಿದೆ.
ನ. 1 ರಂದು ಮಧ್ಯಾಹ್ನದ ವೇಳೆಗೆ 6 ವರ್ಷದ ಹೆಣ್ಣು ಮಗುವೊಂದು ಕೆಂಪೇಗೌಡ ಮೆಟ್ರೋ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ತಾಯಿಯಿಂದ ಬೇರ್ಪಟ್ಟಿತ್ತು. ಪ್ರಯಾಣಿಕರೊಬ್ಬರು ಬೇರ್ಪಟ್ಟ ಮಗುವನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದ್ದರು.
ಮಗು ಸಿಕ್ಕ ಬಗ್ಗೆ ಮೆಟ್ರೋ ಸಿಬ್ಬಂದಿ ಎಲ್ಲಾ ಮೆಟ್ರೋ ನಿಲ್ದಾಣಗಳಿಗೂ ಮಾಹಿತಿ ನೀಡಿದ್ದು, ಮಗುವನ್ನು ಮೆಟ್ರೋ ನಿಲ್ದಾಣದಲ್ಲೇ ಸುರಕ್ಷಿತವಾಗಿ ಕೂರಿಸಿಕೊಂಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ನಿಲ್ದಾಣ ನಿಯಂತ್ರಕರು ತಾಯಿಯನ್ನು ಪತ್ತೆ ಮಾಡಿ ಮಗುವನ್ನು ಅವರಿಗೆ ಹಸ್ತಾಂತರಿಸುವ ಕೆಲಸ ಮಾಡಿದ್ದಾರೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
























