ಬೀಡಿ ಕಂಪನಿ ಮಾಲಕನನ್ನು ಗುಂಡಿಕ್ಕಿ ಸಾಯಿಸಿ ಆತ್ಮಹತ್ಯೆ ಮಾಡಿಕೊಂಡ ಮಗ

ಕುಡಿತದ ವಿಚಾರವಾಗಿ ನಡೆದ ತಂದೆ-ಮಗನ ಜಗಳ ಇಬ್ಬರ ಸಾವಿನಲ್ಲಿ ಅಂತ್ಯ

ನವದೆಹಲಿ : ಭಾರತದ ಪ್ರಮುಖ ಬೀಡಿ ಬ್ರ್ಯಾಂಡ್ ದಿನೇಶ್ ಬೀಡಿಯ ಮಾಲೀಕರಾಗಿದ್ದಸುರೇಶ್ ಚಂದ್ ಎಂಬವರನ್ನು ಅವರ ಮಗನೇ ಗುಂಡು ಕೊಲೆ ಮಾಡಿ ಬಳಿಕ ತಾನೂ ಅದೇ ರಿಲಾಲ್ವರ್‌ನಿಂದ ಗುಂಡಿಕ್ಕಿಕೊಂಡು ಅತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಮಥುರಾದ ವೃಂದಾವನದಲ್ಲಿ ನಡೆದಿದೆ.

ಕುಡಿತದ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಸುರೇಶ್ ಚಂದ್ ಅಗರ್ವಾಲ್ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅವರ ಮಗ ನರೇಶ್ ಅಗರ್ವಾಲ್​ಗೆ ಕುಡಿತದ ಚಟವಿತ್ತು. ಇದು ನಿತ್ಯವೂ ತಂದೆ–ಮಗನ ನಡುವೆ ಗಲಾಟೆಗೆ ಕಾರಣವಾಗುತ್ತಿತ್ತು.





















































 
 

ಶುಕ್ರವಾರವೂ ಸುರೇಶ್ ಚಂದ್ ಹಾಗೂ ನರೇಶ್ ಅಗರ್ವಾಲ್ ನಡುವೆ ಕುಡಿತದ ವಿಚಾರವಾಗಿ ದೊಡ್ಡ ಗಲಾಟೆಯೇ ನಡೆದಿತ್ತು. ಕೋಪದಿಂದ ನರೇಶ್ ತನ್ನ ತಂದೆಗೆ ಗುಂಡು ಹಾರಿಸಿದ್ದಾನೆ. ಬಳಿಕ ತಾನು ಸಿಕ್ಕಿ ಬೀಳುವ ಭಯದಲ್ಲಿ ತನ್ನ ಹಣೆಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಂದೆ ಹಾಗೂ ಮಗ ಇಬ್ಬರೂ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಂತ್ಯಕ್ರಿಯೆ ಶನಿವಾರ ನಡೆದಿದೆ. ಜಿಲ್ಲೆಯಾದ್ಯಂತದ ಉದ್ಯಮಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಸುರೇಶ್ ಚಂದ್ ಅಗರ್ವಾಲ್ ದಿನೇಶ್ 555 ಬೀಡಿ ಕಂಪನಿಯನ್ನು ಬಹಳ ಪರಿಶ್ರಮದಿಂದ ಕಟ್ಟಿದ್ದರು. 1977ರಲ್ಲಿ ಕಂಪನಿಯನ್ನು ಸ್ಥಾಪಿಸಿದ್ದರು. ಈಗ ಇದು ಉತ್ತರ ಭಾರತದಲ್ಲಿ ಪ್ರಮುಖ ಕಂನಿಯಾಗಿದ್ದು, ಕೋಟಿಗಟ್ಟಲೆ ವ್ಯವಹಾರ ನಡೆಸುತ್ತಿದೆ. ಸುರೇಶ್ ಚಂದ್ ಅಗರ್ವಾಲ್ ತಮ್ಮ ಬಹುಕೋಟಿ ಮೌಲ್ಯದ ಬೀಡಿ ವ್ಯವಹಾರವನ್ನು ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಿಗೆ ವಿಸ್ತರಿಸಿದ್ದರು. ದಿನೇಶ್ ಬೀಡಿ ಉತ್ತರ ಭಾರತದಲ್ಲಿ ಬಹಳ ಪ್ರಸಿದ್ಧವಾಗಿತ್ತು.

error: Content is protected !!
Scroll to Top