ಗುರಮಠಕಲ್‌ ಪಟ್ಟಣದಲ್ಲಿ RSS ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್

ಯಾದಗಿರಿ: RSS ಪಥಸಂಚಲನವನ್ನು ‌ಗುರಮಠಕಲ್ ಪಟ್ಟಣದಲ್ಲಿ ನಡೆಸಲು ಕೊನೆಗೂ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ.

RSS ಗೆ 100 ವರ್ಷ ತುಂಬಿದ ಹಿನ್ನೆಲೆ ಕಳೆದ ವಾರವೇ ಪಥಸಂಚಲನ ನಡೆಸಲು ತೀರ್ಮಾನಿಸಲಾಗಿತ್ತು. ಅನುಮತಿಗಾಗಿ ತಹಶೀಲ್ದಾರರಿಗೂ ಅರ್ಜಿ ಸಲ್ಲಿಸಲಾಗಿತ್ತು. ಇದು ಜಿಲ್ಲಾಡಳಿತದ ವ್ಯಾಪ್ತಿಗೆ ಬರುತ್ತದೆ ಎಂದು ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದರು.

ತಹಶೀಲ್ದಾರ್ ಈ ನಡೆಯಿಂದ ವಿವಾದ ಸೃಷ್ಟಿಯಾಗಿತ್ತು. ಜಿಲ್ಲಾಡಳಿತಕ್ಕೆ ಸಂಘ ಮತ್ತೆ ಅರ್ಜಿ ಸಲ್ಲಿಸಿತ್ತು. ಈಗ ಹತ್ತು ಷರತ್ತುಗಳ ಜೊತೆಗೆ ಜಿಲ್ಲಾಡಳಿತ ಅ.31 ರಂದು ಪಥಸಂಚಲನ ‌ನಡೆಸಲು ಅನುಮತಿ ನೀಡಿದೆ.





















































 
 
error: Content is protected !!
Scroll to Top