ಬೆಂಗಳೂರು: ಪೇಯಿಂಗ್ ಗೆಸ್ಟ್ ಉದ್ಯಮ ನಡೆಸುವವರು ಪರವಾನಗಿ ಪಡೆಯುವುದು ಕಡ್ಡಾಯ. ಅನಧಿಕೃತ ಪಿಜಿ ಗಳಿಗೆ ಬೀಗ ಜಡಿಯುವ ಎಚ್ಚರಿಕೆಯನ್ನು ಬೆಂಗಳೂರು ಪೂರ್ವ ನಗರ ಪಾಲಿಕೆ ಎಚ್ಚರಿಕೆ ನೀಡಿದೆ.
ನಗರದಲ್ಲಿ ಹಲವಾರು ಪಿಜಿಗಳು ಪರವಾನಗಿ ಪಡೆಯದೆ, ಸೂಚಿತ ಮಾನದಂಡಗಳನ್ನು ಪಾಲನೆ ಮಾಡದೆ ಕಾರ್ಯನಿರ್ವಹಿಸುತ್ತಿರುವುದು ಪಾಲಿಕೆಯ ಗಮನಕ್ಕೆ ಬಂದಿದೆ. ಅಗತ್ಯ ಮಾನದಂಡಗಳನ್ನು ಪಾಲಿಸದೆ, ಮೂಲಭೂತ ಸ್ವಚ್ಛತೆ, ನೈರ್ಮಲ್ಯಕ್ಕೆ ಆದ್ಯತೆ ನೀಡದ, ಸಿಸಿ ಕೆಮರಾ ಅಳವಡಿಸದೆ ಕಾರ್ಯ ನಿರ್ವಹಿಸುವ ವಿಷಯ ಪಾಲಿಕೆಯ ಗಮನಕ್ಕೆ ಬಂದಿದೆ. ಅನಧಿಕೃತ ಪಿ ಜಿ ಗಳು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಅಪಾಯ ಒಡ್ಡುವುದರುಂದ ಈ ಎಚ್ಚರಿಕೆ ನೀಡಿದೆ.
ಪರವಾನಗಿ ಇಲ್ಲದೆ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಅನಧಿಕೃತ ಪಿಜಿಗಳ ಮಾಲೀಕರು ಸೂಚಿತ ದಿನದ ಒಳಗಾಗಿ ಲೈಸನ್ಸ್ ಪಡೆಯತಕ್ಕದ್ದು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಪಾಲಿಕೆ ತಿಳಿಸಿದೆ.
























