ವಿಜಯನಗರ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆಯಾಗುತ್ತಿದ್ದು, ಪರಿಣಾಮ ಹಂಪಿ ವಿರೂಪಾಕ್ಷ ದೇಗುಲದ ಆವರಣ ಜಲಾವೃತವಾಗಿದೆ.
ದೇಗುಲದ ಆವರಣದಲ್ಲಿ ಮೊಣಕಾಲು ಮುಳುಗುವಷ್ಟು ನೀರು ನಿಂತಿದ್ದು, ಜನರು ಪರದಾಡುವಂತಾಗಿದೆ. ಭಕ್ತರು, ಪ್ರವಾಸಿಗರು ಸಮಸ್ಯೆ ಅನುಭವಿಸುವಂತಾಗಿದೆ. ನೀರಿನ ನಡುವೆಯೇ ಭಕ್ತರು ವಿರೂಪಾಕ್ಷನ ದರ್ಶನ ಪಡೆಯುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
























